ಕಾರ್ಕಳ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ: ಪೊಲೀಸ್ ದಾಳಿ- ನಾಲ್ವರ ಬಂಧನ

ಕಾರ್ಕಳ,ಡಿ 15: ತಾಲೂಕಿನ ಕಸಬಾ ಗ್ರಾಮದ ಭುವನೇಂದ್ರ ಕಾಲೇಜ್ ಬಳಿ ಇರುವ ದಾನೀಯ ಪಿರೇರಾ ಪಟ್ಲ ಹೌಸ್ ಎಂಬ ಮನೆಯಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತು ಕಾರ್ಕಳ ವೃತ್ತ ನಿರೀಕ್ಷಕರಾದ ಟಿ. ಡಿ ನಾಗರಾಜ್ ರವರ ನೇತ್ರತ್ವದಲ್ಲಿ ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಹಾಗೂ ಸುಬ್ರಹ್ಮಣ್ಯ ಹಾಗೂ ನಗರ ಠಾಣಾ ಸಿಬ್ಬಂದಿಗಳೊಂದಿಗೆ ಗುರುವಾರ ಸಂಜೆ ದಾಳಿ ನಡೆಯಿಸಿದ್ದಾರೆ.

ಖಚಿತ ಮಾಹಿತಿಯಂತೆ ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಿ ಅಕ್ರಮ ಲಾಭ ಪಡೆಯುತ್ತಿದ ಉಪೇಂದ್ರ ನಾಯಕ್ (ಯಾನೆ ಅವಿನಾಶ), ಪ್ರವೀಣ ಕುಮಾರ್‌ , ಗೋವರ್ಧನ, ಅಶೋಕ್ ಎಂಬವರನ್ನು ಕಾರ್ಕಳ ನಗರ ಪೊಲೀಸರು ವಶಕ್ಕೆ ಪಡೆದು ಒರ್ವ ಸಂತ್ರಸ್ಥೆ ಮಹಿಳೆಯನ್ನು ರಕ್ಷಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!