ಸಂಸತ್‌ ಭದ್ರತಾ ವೈಫಲ್ಯ: ಎಂಟು ಲೋಕಸಭಾ ಸಿಬ್ಬಂದಿ ಅಮಾನತು

ಹೊಸದಿಲ್ಲಿ: ಲೋಕಸಭೆಯಲ್ಲಿ ಬುಧವಾರ ನಡೆದ ಭದ್ರತಾ ವೈಫಲ್ಯ ಘಟನೆಗೆ ಸಂಬಂಧಿಸಿದಂತೆ ಕನಿಷ್ಠ ಎಂಟು ಲೋಕಸಭಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಬುಧವಾರ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ಸಂಸತ್ತಿನ ಬಾವಿಯೊಳಗೆ ಜಿಗಿದು ಕಲರ್ ಸ್ಮೋಕ್ ಸಿಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಎಂಬವರನ್ನು ಅಮಾನತುಗೊಳಿಸಲಾಗಿದೆ.

ಶೂನ್ಯ ವೇಳೆಯಲ್ಲಿ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ಸದನದ ಬಾವಿಯೊಳಗೆ ಜಿಗಿದು ಕಲರ್ ಸ್ಮೋಕ್ ಸಿಡಿಸುತ್ತಿದ್ದಂತೆ ಸಂಸದರು ಲೋಕಸಭೆಯಿಂದ ಹೊರಗೆ ಬಂದಿದ್ದಾರೆ. ಸಭಾಪತಿ ರಾಜೇಂದ್ರ ಅಗರವಾಲ್ ತಕ್ಷಣವೇ ಕಲಾಪವನ್ನು ಮುಂದೂಡಿದರು.

Leave a Reply

Your email address will not be published. Required fields are marked *

error: Content is protected !!