ವಾಹನ ಚಾಲನಾ ತರಬೇತಿ ದುಬಾರಿ: ಜ.1 ರಿಂದ ಹೊಸ ದರ ಅನ್ವಯ

ರಾಜ್ಯದಲ್ಲಿರುವ ಡ್ರೖೆವಿಂಗ್ ಸ್ಕೂಲ್​ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ವಾಹನ ಚಾಲನಾ ತರಬೇತಿ 2024ರ ಜ.1ರಿಂದ ದುಬಾರಿಯಾಗಲಿದ್ದು, ಕಾರು ಚಾಲನೆ ಕಲಿಯಬೇಕೆಂದರೆ 7 ಸಾವಿರ ರೂ. ಪಾವತಿಸಬೇಕಾಗುತ್ತದೆ.

ಚಾಲನಾ ತರಬೇತಿ ಶಾಲೆಗಳ ನಿರಂತರ ಹೋರಾಟದಿಂದಾಗಿ 10 ವರ್ಷಗಳ ನಂತರ ದರ ಹೆಚ್ಚಿಸಲು ಅನುಮತಿ ಸಿಕ್ಕಿದೆ.ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗದಲ್ಲಿ ಶುಲ್ಕ ನಿಗದಿ ಪಡಿಸಲಾಗಿದೆ. ಲಘು ಮೋಟಾರು ವಾಹನ (ಕಾರು) ಚಾಲನಾ ತರಬೇತಿಗೆ ಹೊಸ ದರ 7 ಸಾವಿರ ರೂ. ನಿಗದಿ ಪಡಿಸಲಾಗಿದೆ. ಇದಲ್ಲದೆ ಎಲ್​ಎಲ್​ಗೆ 350 ರೂ. ಹಾಗೂ ಡಿಎಲ್​ಗೆ 1,000 ರೂ. ಪ್ರತ್ಯೇಕವಾಗಿ ಆರ್​ಟಿಒ ಕಚೇರಿಗೆ ಪಾವತಿಸಬೇಕು. ಅಂದರೆ ಒಬ್ಬ ಅಭ್ಯರ್ಥಿ ಡ್ರೖೆವಿಂಗ್ ಕಲಿತು ಲೈಸೆನ್ಸ್ ಪಡೆಯಲು ಒಟ್ಟು 8350 ರೂ. ಖರ್ಚು ಮಾಡಬೇಕಾಗುತ್ತದೆ. ಪ್ರಸ್ತುತ ಕಾರು ಡ್ರೖೆವಿಂಗ್ ಟ್ರೖೆನಿಂಗ್​ಗೆ 4 ಸಾವಿರ ರೂ. ಶುಲ್ಕ ಇದೆ. ಎಲ್​ಎಲ್, ಡಿಎಲ್ ಎಲ್ಲವೂ ತಾವೇ ಮಾಡಿಸಿಕೊಡುವುದಾಗಿ ಡ್ರೖೆವಿಂಗ್ ಸ್ಕೂಲ್​ಗಳು 8 ಸಾವಿರ ರೂ.ವರೆಗೆ ಖರ್ಚು ಮಾಡಬೇಕಾಗುತ್ತದೆ.

ಪ್ರಸ್ತುತ ಕಾರು ಡ್ರೖೆವಿಂಗ್ ಟ್ರೖೆನಿಂಗ್​ಗೆ 4 ಸಾವಿರ ರೂ. ಶುಲ್ಕ ಇದೆ. ಎಲ್​ಎಲ್, ಡಿಎಲ್ ಎಲ್ಲವೂ ತಾವೇ ಮಾಡಿಸಿಕೊಡುವುದಾಗಿ ಡ್ರೖೆವಿಂಗ್ ಸ್ಕೂಲ್​ಗಳು 8 ಸಾವಿರ ರೂ.ವರೆಗೆ ಅಭ್ಯರ್ಥಿಯಿಂದ ಪಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದರೆ ಹೆಚ್ಚುವರಿಯಾಗಿ 4 ಸಾವಿರ ರೂ. ಸ್ವೀಕರಿಸುತ್ತಿದ್ದಾರೆ. ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ವಸೂಲಿ ಮಾಡದಂತೆ ಸಾರಿಗೆ ಇಲಾಖೆ ಎಚ್ಚರಿಕೆ ಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಶುಲ್ಕ ಏರಿಕೆ ಯಾಕೆ?
ಡ್ರೖೆವಿಂಗ್ ಸ್ಕೂಲ್​ಗಳ ನಿರ್ವಹಣೆ, ಇಂಧನ ಬಳಕೆ, ಕಲಿಕೆ ವೇಳೆ ವಾಹನಗಳ ಡ್ಯಾಮೇಜ್, ಇನ್ಸುರೆನ್ಸ್ ಚಾಲಕರ ಸಂಬಳ ಇನ್ನಿತರ ಅಂಶಗಳನ್ನು ಪರಿಗಣಿಸಿ ತರಬೇತಿ ಶುಲ್ಕ ಹೆಚ್ಚಿಸಲಾಗಿದೆ. ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್​ಟಿಒಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ತಯಾರಿಸಿ 2 ವರ್ಷಗಳ ಹಿಂದೆಯೇ ಇಲಾಖೆಗೆ ಸಲ್ಲಿಸಿತ್ತು. ಈಗ ವರದಿ ಅಂಗೀಕರಿಸಿ ಶುಲ್ಕ ಜಾಸ್ತಿ ಮಾಡಲಾಗಿದೆ.

ಶುಲ್ಕ ಪರಿಷ್ಕರಣೆ, ವಾಹನ ಮೊದಲು ಈಗ (ರೂ.ಗಳಲ್ಲಿ)

ಮೋಟಾರು ಸೈಕಲ್: 2,200-3000
ಆಟೋರಿಕ್ಷಾ: 3,000-4000

ಕಾರುಗಳು: 4,000-7000

ಸಾರಿಗೆ ವಾಹನ: 6,000-9000

ಈಗಿನ ವಾಹನ ಚಾಲನೆ ಹಾಗೂ ಸಂಚಾರ ದಟ್ಟಣೆಯ ಸವಾಲುಗಳನ್ನು ಗಮನಿಸಿದರೆ ಡ್ರೖೆವಿಂಗ್ ಟ್ರೖೆನಿಂಗ್​ನ ಕೌಶಲ್ಯವೂ ಜಾಸ್ತಿಯಾಗಬೇಕು. ಅದರ ಜತೆಗೆ ಚಾಲನಾ ತರಬೇತಿ ಶುಲ್ಕವೂ ಹೆಚ್ಚಾಗಬೇಕು.

Leave a Reply

Your email address will not be published. Required fields are marked *

error: Content is protected !!