ಬ್ರಹ್ಮಾವರ: ರೈಲು ಡಿಕ್ಕಿ- ಬಡಗಿ ಮೃತ್ಯು

ಬ್ರಹ್ಮಾವರ, ಡಿ.12: ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.11ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಹೆರಂಜೆಯ ಜಗದೀಶ (40) ಎಂದು ಗುರುತಿಸಲಾಗಿದೆ. ಕೊಳಲಗಿರಿಯಲ್ಲಿ ಮರದ ಕೆಲಸ ಮಾಡಿಕೊಂಡಿದ್ದ ಇವರು, ಕೆಲಸ ಮುಗಿಸಿ ಮನೆಗೆ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ರೈಲು ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಜಗದೀಶ್ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!