ವಾಹನ ಚಾಲನಾ ತರಬೇತಿ ದುಬಾರಿ: ಜ.1 ರಿಂದ ಹೊಸ ದರ ಅನ್ವಯ
ರಾಜ್ಯದಲ್ಲಿರುವ ಡ್ರೖೆವಿಂಗ್ ಸ್ಕೂಲ್ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ವಾಹನ ಚಾಲನಾ ತರಬೇತಿ 2024ರ ಜ.1ರಿಂದ ದುಬಾರಿಯಾಗಲಿದ್ದು, ಕಾರು ಚಾಲನೆ ಕಲಿಯಬೇಕೆಂದರೆ 7 ಸಾವಿರ ರೂ. ಪಾವತಿಸಬೇಕಾಗುತ್ತದೆ.
ಚಾಲನಾ ತರಬೇತಿ ಶಾಲೆಗಳ ನಿರಂತರ ಹೋರಾಟದಿಂದಾಗಿ 10 ವರ್ಷಗಳ ನಂತರ ದರ ಹೆಚ್ಚಿಸಲು ಅನುಮತಿ ಸಿಕ್ಕಿದೆ.ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗದಲ್ಲಿ ಶುಲ್ಕ ನಿಗದಿ ಪಡಿಸಲಾಗಿದೆ. ಲಘು ಮೋಟಾರು ವಾಹನ (ಕಾರು) ಚಾಲನಾ ತರಬೇತಿಗೆ ಹೊಸ ದರ 7 ಸಾವಿರ ರೂ. ನಿಗದಿ ಪಡಿಸಲಾಗಿದೆ. ಇದಲ್ಲದೆ ಎಲ್ಎಲ್ಗೆ 350 ರೂ. ಹಾಗೂ ಡಿಎಲ್ಗೆ 1,000 ರೂ. ಪ್ರತ್ಯೇಕವಾಗಿ ಆರ್ಟಿಒ ಕಚೇರಿಗೆ ಪಾವತಿಸಬೇಕು. ಅಂದರೆ ಒಬ್ಬ ಅಭ್ಯರ್ಥಿ ಡ್ರೖೆವಿಂಗ್ ಕಲಿತು ಲೈಸೆನ್ಸ್ ಪಡೆಯಲು ಒಟ್ಟು 8350 ರೂ. ಖರ್ಚು ಮಾಡಬೇಕಾಗುತ್ತದೆ. ಪ್ರಸ್ತುತ ಕಾರು ಡ್ರೖೆವಿಂಗ್ ಟ್ರೖೆನಿಂಗ್ಗೆ 4 ಸಾವಿರ ರೂ. ಶುಲ್ಕ ಇದೆ. ಎಲ್ಎಲ್, ಡಿಎಲ್ ಎಲ್ಲವೂ ತಾವೇ ಮಾಡಿಸಿಕೊಡುವುದಾಗಿ ಡ್ರೖೆವಿಂಗ್ ಸ್ಕೂಲ್ಗಳು 8 ಸಾವಿರ ರೂ.ವರೆಗೆ ಖರ್ಚು ಮಾಡಬೇಕಾಗುತ್ತದೆ.
ಪ್ರಸ್ತುತ ಕಾರು ಡ್ರೖೆವಿಂಗ್ ಟ್ರೖೆನಿಂಗ್ಗೆ 4 ಸಾವಿರ ರೂ. ಶುಲ್ಕ ಇದೆ. ಎಲ್ಎಲ್, ಡಿಎಲ್ ಎಲ್ಲವೂ ತಾವೇ ಮಾಡಿಸಿಕೊಡುವುದಾಗಿ ಡ್ರೖೆವಿಂಗ್ ಸ್ಕೂಲ್ಗಳು 8 ಸಾವಿರ ರೂ.ವರೆಗೆ ಅಭ್ಯರ್ಥಿಯಿಂದ ಪಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದರೆ ಹೆಚ್ಚುವರಿಯಾಗಿ 4 ಸಾವಿರ ರೂ. ಸ್ವೀಕರಿಸುತ್ತಿದ್ದಾರೆ. ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ವಸೂಲಿ ಮಾಡದಂತೆ ಸಾರಿಗೆ ಇಲಾಖೆ ಎಚ್ಚರಿಕೆ ಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಶುಲ್ಕ ಏರಿಕೆ ಯಾಕೆ?
ಡ್ರೖೆವಿಂಗ್ ಸ್ಕೂಲ್ಗಳ ನಿರ್ವಹಣೆ, ಇಂಧನ ಬಳಕೆ, ಕಲಿಕೆ ವೇಳೆ ವಾಹನಗಳ ಡ್ಯಾಮೇಜ್, ಇನ್ಸುರೆನ್ಸ್ ಚಾಲಕರ ಸಂಬಳ ಇನ್ನಿತರ ಅಂಶಗಳನ್ನು ಪರಿಗಣಿಸಿ ತರಬೇತಿ ಶುಲ್ಕ ಹೆಚ್ಚಿಸಲಾಗಿದೆ. ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್ಟಿಒಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ತಯಾರಿಸಿ 2 ವರ್ಷಗಳ ಹಿಂದೆಯೇ ಇಲಾಖೆಗೆ ಸಲ್ಲಿಸಿತ್ತು. ಈಗ ವರದಿ ಅಂಗೀಕರಿಸಿ ಶುಲ್ಕ ಜಾಸ್ತಿ ಮಾಡಲಾಗಿದೆ.
ಶುಲ್ಕ ಪರಿಷ್ಕರಣೆ, ವಾಹನ ಮೊದಲು ಈಗ (ರೂ.ಗಳಲ್ಲಿ)
ಮೋಟಾರು ಸೈಕಲ್: 2,200-3000
ಆಟೋರಿಕ್ಷಾ: 3,000-4000
ಕಾರುಗಳು: 4,000-7000
ಸಾರಿಗೆ ವಾಹನ: 6,000-9000
ಈಗಿನ ವಾಹನ ಚಾಲನೆ ಹಾಗೂ ಸಂಚಾರ ದಟ್ಟಣೆಯ ಸವಾಲುಗಳನ್ನು ಗಮನಿಸಿದರೆ ಡ್ರೖೆವಿಂಗ್ ಟ್ರೖೆನಿಂಗ್ನ ಕೌಶಲ್ಯವೂ ಜಾಸ್ತಿಯಾಗಬೇಕು. ಅದರ ಜತೆಗೆ ಚಾಲನಾ ತರಬೇತಿ ಶುಲ್ಕವೂ ಹೆಚ್ಚಾಗಬೇಕು.