ಉಡುಪಿ: ವಾಯು ವಿಹಾರಕ್ಕೆ ಹೋಗಿದ್ದ ವೃದ್ಧನ ಮೊಬೈಲ್, ಪರ್ಸ್, ಆಭರಣ ಸುಲಿಗೆ
ಉಡುಪಿ, ಡಿ.6: ಮರೆವು ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರಿಗೆ ಅಪರಿಚಿತರ ತಂಡ ಹಲ್ಲೆ ನಡೆಸಿ ಸುಲಿಗೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
76 ಬಡಗಬೆಟ್ಟು ಗ್ರಾಮದ ಬೈಲೂರು ನಿವಾಸಿ ಸಂಜೀವ (82) ಎಂಬವರು ಒಂದು ವರ್ಷದಿಂದ ಮರೆವು ಖಾಯಿಲೆಯಿಂದ ಬಳಲುತ್ತಿದ್ದು, ನ.30ರಂದು ಬೆಳಗ್ಗೆ ಮನೆಯಿಂದ ವಾಕಿಂಗ್ಗೆ ತೆರಳಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಸಂಜೀವ ಅವರಿಗೆ ಹಲ್ಲೆ ಮಾಡಿ ಮೊಬೈಲ್, ಪರ್ಸ್ ಮತ್ತು ಚಿನ್ನದ ಉಂಗುರವನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.