ಮಲ್ಪೆ ಬೀಚ್ ಮಧ್ಯೆ ಅಪಾಯಕಾರಿ ಜೀಪ್ ಚಾಲನೆ: ಪ್ರಕರಣ ದಾಖಲು
ಮಲ್ಪೆ, ಡಿ.6: ಪ್ರವಾಸಿ ತಾಣವಾಗಿರುವ ಮಲ್ಪೆ ಬೀಚ್ ಮಧ್ಯೆ ಅಪಾಯಕಾರಿ ರೀತಿಯಲ್ಲಿ ಜೀಪು ಚಲಾಯಿಸಿದ ಇಬ್ಬರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಭರತ್ ಮತ್ತು ನಂಜೆಗೌಡ ಎಂಬವರು ಡಿ.5 ರಂದು ಮಧ್ಯಾಹ್ನ ಬೀಚ್‌ನ ಸಾರ್ವಜನಿಕ ಶೌಚಾಲಯದಿಂದ ಫಿಶರ್ ಮ್ಯಾನ್ ಹೋಟೆಲ್ ತನಕ ಬೀಚ್ ಮಧ್ಯದಲ್ಲಿ ಜೀಪ್ ಚಲಾಯಿಸಿಕೊಂಡು ಬಂದು ನಿಲ್ಲಿಸಿದ್ದು, ಬೀಚ್‌ಗೆ ಯಾವುದೇ ವಾಹನಗಳ ಪ್ರವೇಶ ಇಲ್ಲದೆ ಇದ್ದರೂ ಇವರು, ಮಹಿಳೆಯರು ಮಕ್ಕಳು ಸೇರಿದಂತೆ ಸುಮಾರು ಜನ ತುಂಬಿರುವ ಜೀಪನ್ನು ಬೀಚ್ ಮಧ್ಯದಲ್ಲಿ ಜನರ ಜೀವಕ್ಕೆ ಅಪಾಯಕಾರಿಯಾ ಗುವ ರೀತಿಯಲ್ಲಿ ಚಲಾಯಿಸಿರುವುದಾಗಿ ದೂರಲಾಗಿದೆ.