ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗೊಳ್ಳುವಿಕೆ ಶಿಕ್ಷಣಕ್ಕೆ ಪೂರಕ: ಶಿವಾನಿ ನವೀನ್

ಉಡುಪಿ: ವಿದ್ಯಾರ್ಥಿಗಳು ತಮ್ಮ ಶಿಕ್ಷಣದೊಂದಿಗೆ ನೃತ್ಯ, ಹಾಡು, ನಾಟಕ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವುದು ಅವರ ಸಮಗ್ರ ಬೆಳವಣಿಗೆಗೆ ಪೂರಕವಾಗುತ್ತದೆ. ಮಕ್ಕಳು ಇದನ್ನು ಅರ್ಥೈಸಿಕೊಂಡರೆ ಅವರ ಬದುಕಲ್ಲಿ ಹೊಸ ನೋಟ, ಹೊಸ ಆಲೋಚನೆ ಮೂಡಲು ಸಾಧ್ಯವಾಗುತ್ತದೆ ಎಂದು ಝೀಕನ್ನಡ ಟಿವಿ ಸರಿಗಮಪ ಲಿಟಲ್ ಚಾಂಪಿಯನ್ ಶಿಪ್ ಸೀಸನ್ 19ರ ದ್ವಿತೀಯ ಪ್ರಶಸ್ತಿ ವಿಜೇತೆ ಶಿವಾನಿ ನವೀನ್ ಹೇಳಿದ್ದಾರೆ.

ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಉದ್ಯಾವರ ಶ್ರೀವಿಠೋಬ ರುಖುಮಾಯಿ ನಾರಾ‌ಯಣ ಗುರು ಮಂದಿರದಲ್ಲಿ ಶನಿವಾರ ಜರಗಿದ ಯುಎಫ್‌ಸಿ ಮಕ್ಕಳ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅನಿವಾಸಿ ಭಾರತೀಯರ ಕಾಂಗ್ರೆಸ್ ಘಟಕದ ಅಧ್ಯಕ್ಷ ಉಡುಪಿ ಶೇಖ್ ವಾಹಿದ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಶಿವಾನಿ ನವೀನ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ರಮೇಶ್ ಕುಮಾರ್ ಉದ್ಯಾವರ, ಶರತ್ ಕುಮಾರ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ತಿಲಕ್‌ರಾಜ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಆಶಾ ವಾಸು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಅಲಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಮುನ್ನ ಉದ್ಯಾವರ ಹಿಂದೂ ಶಾಲೆಯ ಬಳಿಯಿಂದ ಸಮಾರಂಭದ ಸಭಾಂಗಣದ ತನಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಮೆರವಣಿಗೆ ಜರಗಿತು

Leave a Reply

Your email address will not be published. Required fields are marked *

error: Content is protected !!