ಶಿರೂರಿನಲ್ಲಿ ಅಗ್ನಿ ಅವಘಡ: ಶೆಡ್‌ನಲ್ಲಿದ್ದ ಕಾರು, ಬೈಕ್ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮ

ಉಡುಪಿ: ಬೈಂದೂರು ತಾಲೂಕಿನ ಶಿರೂರಿನ ಬುಖಾರಿ ಕಾಲನಿಯ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಕಾರು, ದ್ವಿಚಕ್ರ ವಾಹನ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾಗಿದೆ.

ಬುಖಾರಿ ಕಾಲನಿಯ ಸಿನಾ ಫರ್ಹಿನ್ ಎಂಬವರಿಗೆ ಸೇರಿದ ಮನೆಯಲ್ಲಿ ಬುಧವಾರ ತಡರಾತ್ರಿ 1:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಂಕಿಯ ರೌದ್ರಾವತಾರಕ್ಕೆ ಮನೆಗೆ ತಾಗಿಕೊಂಡಿರುವ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ ಸುಟ್ಟು ಕರಕಲಾಗಿದೆ. ಮನೆಯೊಳಗೆ ಅಳವಡಿಸಿದ್ದ ಏರ್ ಕಂಡಿಶನರ್, ಮನೆಯ ಗೋಡೆ ಮತ್ತು ಪೈಪ್ ಲೈನ್, ಕಿಟಕಿ, ಗಾಜುಗಳಿಗೆ ಮತ್ತು ಕೋಣೆಯಲ್ಲಿದ್ದ ಮರದ ಮಂಚ, ಬೆಡ್ ಗೆ ಹಾನಿಯುಂಟಾಗಿದೆ. ಅಂದಾಜು 16.70 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!