ಶಿವಾನಂದ ಕೋಟ್ಯಾನ್ ಮಸ್ಕತ್ ಅವರಿಗೆ “ಸೇವಾ ಚೈತನ್ಯ-2023” ಪ್ರಶಸ್ತಿ

ಉಡುಪಿ: ಕಡೆಕಾರು ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಪಂಚಮ ವರುಷದ ಸಂಭ್ರಮಾಚರಣೆಯ ಅಂಗವಾಗಿ ಬೆಳಕಿನ ಹಬ್ಬ ದೀಪಾವಳಿ ಆಚರಣೆ, ಚಿತ್ರಕಲಾ ಸ್ಪರ್ಧೆ ಹಾಗೂ “ಸೇವಾ ಚೈತನ್ಯ- 2023” ಪ್ರಶಸ್ತಿ ಪ್ರಧಾನ ಸಮಾರಂಭ ಕಡೆಕಾರು ಬಿಲ್ಲವ ಸೇವಾ ಸಂಘದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಾನಪದ ವಿದ್ವಾಂಸರಾದ ಡಾ.ಗಣನಾಥ್ ಎಕ್ಕಾರು ಅವರು ಮಾತನಾಡಿ ಧಾರ್ಮಿಕ ಆಚರಣೆಗಳು ಬರೀ ಆಚರಣೆಗಳಲ್ಲಾ, ಅದು ನಮ್ಮಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಲು ಪರೋಕ್ಷ ಸಂದೇಶವನ್ನು ಕೂಡ ನೀಡುತ್ತವೆ. ದೀಪಾವಳಿ ದೇಶದ ಎಲ್ಲಾ ಜನರು ಸೇರಿ ಆಚರಿಸುವ ಅತೀ ದೊಡ್ಡ ಹಬ್ಬ ಹಾಗೂ ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಣೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಿದವರನ್ನು ಗುರುತಿಸಿ ಅವರಿಗೆ ಸೇವಾ ಚೈತನ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನಾರ್ಹ ಎಂದರು.

ಸಾಮಾಜಿಕ, ಆರೋಗ್ಯ, ಶೆಕ್ಷಣಿಕ, ಧಾರ್ಮಿಕ ಹಾಗೂ ಇನ್ನೂ ಹಲವು ಕ್ಷೇತ್ರಗಳಲ್ಲಿ ಸಹಾಯ ಹಸ್ತವನ್ನು ನೀಡಿ ಸಮಾಜಕ್ಕೆ ತನ್ನ ಸೇವೆಯನ್ನು ಸಲ್ಲಿಸುತ್ತಿರುವ ಶಿವಾನಂದ ಕೋಟ್ಯಾನ್ ಮಸ್ಕತ್ ಅವರಿಗೆ ಈ ಬಾರಿಯ “ಸೇವಾ ಚೈತನ್ಯ 2023” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಸ್ತೆ ಸಂಚಾರ ನಿಯಮ ಮತ್ತು ಸೈಬರ್ ಕ್ರೈ ಮಾಹಿತಿ ಕಾರ್ಯಕ್ರಮ ಹಾಗೂ ಮಕ್ಕಳಿಗೆ ದೀಪಾವಳಿ ಆಚರಣೆಯ ವಿಷಯದಲ್ಲಿ ಚಿತ್ರಕಲೆ ಸ್ಪರ್ಧೆ ನಡೆದವು. ಸ್ಮಾರ್ಟ್ ಗೈಸ್ ಡ್ಯಾನ್ಸ್ ಏಕಾಡಮಿಯಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾಹೆ ಕಂಪ್ಯೂಟರ್ ಡಾಟ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ.ದಶರಥರಾಜ್ ಶೆಟ್ಟಿ, ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಕರ ಶೇರಿಗಾರ್, ಉಪಾಧ್ಯಕ್ಷ ನವೀನ್ ಶೆಟ್ಟಿ, ರೋಟರಿ ಕ್ಲಬ್ ಅಂಬಲಪಾಡಿ ಅಧ್ಯಕ್ಷ ಅಶೋಕ್ ಶೆಟ್ಟಿ,ಅನು ಡೆಂಟಲ್ & ಆಯುರ್ವೇದದ ಮುಖ್ಯಸ್ಥೆ ಡಾ. ಅನುಪಮಾ ಸುನೀಲ್, ಜತಿನ್ ಕಡೆಕಾರ್, ಚೇತನ್ ಸುವರ್ಣ, ತಾರಾನಾಥ್ ಮೊದಲಾದವರು ಉಪಸ್ಥಿತರಿದ್ದರು.

ಚೈತನ್ಯ ಫೌಂಡೇಶನ್ ಅಧ್ಯಕ್ಷರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಸ್ವಾಗತಿಸಿದರು, ನೀಲಾವತಿ ಎ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!