ಪುತ್ತಿಗೆ ಪರ್ಯಾಯ- 2024: ಕೆನರಾ ಬ್ಯಾಂಕ್ ನಿಂದ 25ಲಕ್ಷ ರೂ. ವಿಶೇಷ ದೇಣಿಗೆ

ಉಡುಪಿ: ಶ್ರೀಸುಗುಣೇಂದ್ರ ತೀರ್ಥ ಶ್ರೀಗಳವರ ಚತುರ್ಥ ಪರ್ಯಾಯವು ವೈಭೋವೋಪೇತವಾಗಿ ನಡೆಸುವಂತೆ ಕೆನರಾ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಕೆ. ಸತ್ಯನಾರಾಯಣ ರಾಜುರವರು ಪುತ್ತಿಗೆ ಪರ್ಯಾಯದ ಆರ್ಥಿಕ ಮನವಿಗೆ ಸ್ಪಂದಿಸಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎಚ್.ಎಸ್. ಬಲ್ಲಾಳರಿಗೆ ರೂ.25 ಲಕ್ಷ ದೇಣಿಗೆಯನ್ನು ಹಸ್ತಾಂತರಿಸಿದರು.

ಪುತ್ತಿಗೆ ಪರ್ಯಾಯಕ್ಕೆ ಮುಂದೆಯೂ ತಮ್ಮ ಸಂಸ್ಥೆಯಿಂದ ಸರ್ವ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಮಠದ ದಿವಾನರಾದ ನಾಗರಾಜ್ ಆಚಾರ್ಯ, ಕೋಶಾಧಿಕಾರಿ ರಂಜನ್ ಕಲ್ಕೂರ, ಸಂಚಾಲಕರಾದ ಜಯಕರ ಶೆಟ್ಟಿ ಇಂದ್ರಾಳಿ, ರಮೇಶ್ ಭಟ್ ಕೆ, ಸಮಿತಿ ಸದಸ್ಯರುಗಳಾದ ರವೀಂದ್ರ ಆಚಾರ್ಯ, ಉಮೇಶ್ ಭಟ್ ಹಾಗು ಬ್ಯಾಂಕಿನ ಅಧಿಕಾರಿಗಳಾದ ಎಂ.ಜಿ .ಪಂಡಿತ್ ವಿನೋದ್ ವಿಷ್ಣು ಜೋಶಿ, ರಾಜೀವ್ ತುಕ್ರಾಲ್, ರವಿ ಪ್ರಸಾದ್ ಭಟ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!