ಆಷಾಢದ ಪ್ರತಿ ಆಚರಣೆಯ ಹಿಂದೆ ವೈದ್ಯಕೀಯ ಮಹತ್ವವಿದೆ – ಡಾ.ಸೌಮ್ಯ

ಉಡುಪಿ: ಡಾ.ಅನು ಅಯುರ್ವೇದ, ಚೈತನ್ಯ ಫೌಂಡೇಶನ್ (ರಿ) ಹಾಗೂ ರೋಟರಿ ಕ್ಲಬ್ ಅಂಬಲಪಾಡಿ ಇದರ ಆಶ್ರಯದಲ್ಲಿ ‘ಆಷಾಢದಲ್ಲಿ ಆರೋಗ್ಯ ಮತ್ತು ಆಹಾರ’ ಮಾಹಿತಿ ಕಾರ್ಯಕ್ರಮ ಅಂಬಲಪಾಡಿ ಅನು ಡೆಂಟಲ್ ಮತ್ತು ಆಯುರ್ವೇದದ ಮೆಂಡನ್ಸ್ ಗಿರಿಜಾ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಆಷಾಢದ ಜೀವನ ಮತ್ತು ಆಚರಣೆ ಮತ್ತು ಮಂದಿನ ಜನಾಂಗ ಇದನ್ನು ಅನುಸರಿಸಿಕೂಂಡ ಹೋಗುವ ಅಗತ್ಯತೆಯನ್ನು ತಿಳಿಸಿದರು.

ಅನು ಅಯುರ್ವೇದದ ವೈದ್ಯೆ ಡಾ.ಸೌಮ್ಯ ಅವರು ‘ಆಷಾಢದಲ್ಲಿ ಆರೋಗ್ಯ ಮತ್ತು ಆಹಾರ’ ಮಾಹಿತಿ ಕಾರ್ಯಾಗಾರವನ್ನು ನಡೆಸಿ ಆಷಾಢದ ಪ್ರತಿ ಆಚರಣೆಯ ಹಿಂದೆ ವೈದ್ಯಕೀಯ ಮಹತ್ವ ಇದೆ, ಆಷಾಢದಲ್ಲಿ ದೇಹ ಪ್ರಕೃತಿಗೆ ಅನುಗುಣವಾಗಿ ಹಿಂದಿನವರು ಆಚರಣೆ ಮತ್ತು ಆಹಾರ ಕ್ರಮವನ್ನು ನಡೆಸಿಕೂಂಡು ಬಂದಿದ್ದಾರೆ ಎಂದರು. ಆಷಾಢದಲ್ಲಿ ರೂಢಿಸಿಕೊಳ್ಳಬೇಕಾದ ಆಯುರ್ವೇದ ದಿನಚರಿ ಮತ್ತು ಪತ್ಯದ ಬಗ್ಗೆ ಮಾಹಿತಿ ನೀಡಿದರು.

ಸಾಮಾಜಿಕ ಕಾರ್ಯಕರ್ತೆ, ಯುಟ್ಯೂಬ್ ಬ್ಲಾಗರ್ ಅಶ್ವಿನಿ ಆರ್ ಶೆಟ್ಟಿಯವರು ಆಷಾಢದ ಆಚರಣೆ ಮತ್ತು ಆಹಾರ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ರೋಟರಿ ಕ್ಲಬ್ ಅಂಬಲಪಾಡಿ ಅಧ್ಯಕ್ಷ ರೊI ಅಶೋಕ್ ಶೆಟ್ಟಿ, ರೊI ಮೋಹನದಾಸ ಪೈ, ಮಧುಮೇಹ ತಜ್ಞೆ ಡಾ. ಶೃತಿ ಬಲ್ಲಾಳ್, ಜೋಸೆಫ್ ರೆಬೆಲ್ಲೋ ಮೊದಲಾದವರು ಉಪಸ್ಥಿತರಿದ್ದರು. ಲೀಲಾ ಭಟ್ ಸ್ವಾಗತಿಸಿ, ನೀಲಾವತಿ ಎ.ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!