ಕಟಪಾಡಿ: ಬಸ್- ಬೈಕ್‌ ಅಪಘಾತ, ಹೂವಿನ ವ್ಯಾಪಾರಿ ಸ್ಥಳದಲ್ಲೇ ಸಾವು

ಉಡುಪಿ: ರಾಷ್ಟೀಯ ಹೆದ್ದಾರಿ 66ರ ಕಟಪಾಡಿ ಸರ್ವಿಸ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಹೂವಿನ ವ್ಯಾಪಾರಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮೃತರನ್ನು ಮಲ್ಲಿಗೆ ಹೂವಿನ ವ್ಯಾಪಾರ ಮಾಡುತ್ತಿದ್ದ, ಕಟಪಾಡಿ ಸರಕಾರಿ ಗುಡ್ಡೆ ನಿವಾಸಿ ಇಕ್ಬಾಲ್ (32) ಎಂದು ಗುರುತಿಸಲಾಗಿದೆ.

ಬಸ್ ಮತ್ತು ಬೈಕ್ ನಡುವೆ ಅಪಘಾತ ನಡೆದಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದು ಸಾರ್ವಜನಿಕರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಸ್‌ ಉಡುಪಿಯಿಂದ ಮಂಗಳೂರು ಕಡೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!