ಉಡುಪಿ: ಕಾರ್ಮಿಕ ಅಧಿಕಾರಿ ಮನೆಗೆ ಲೋಕಾಯುಕ್ತ ದಾಳಿ- ಕೋಟ್ಯಾಂತರ ರೂ. ಅಕ್ರಮ ಆಸ್ತಿ ಪತ್ತೆ?

ಉಡುಪಿ,ಜೂ.1: ಜಿಲ್ಲೆಯ ಕಾರ್ಮಿಕ ಅಧಿಕಾರಿ ಕುಮಾರ್ ಅವರ ಕೊರಂಗ್ರಪಾಡಿಯ ಮನೆ ಹಾಗೂ ಕಚೇರಿ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ಎರಡು ತಂಡಗಳು ದಾಳಿ ನಡೆಸಿದ್ದು, ಆದಾಯ, ಆಸ್ತಿಪಾಸ್ತಿಗಳ ವಿವರ, ಚಿನ್ನಾಭರಣಗಳ ಮಾಹಿತಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸುತಿದ್ದಾರೆ.

ಮಣಿಪಾಲದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಕಚೇರಿಗೆ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು ಲೋಕಾಯುಕ್ತದ ಪೊಲೀಸ್ ಅಧೀಕ್ಷಕ ಸಿ.ಎ ಸೈಮನ್ ಇವರ ನಿರ್ದೇಶನದಂತೆ ಉಡುಪಿ ಉಡುಪಿ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಮನೆ ಹಾಗೂ ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ವೇಳೆ ಅಪಾರ ಪ್ರಮಾಣದ ಸಂಪತ್ತು ಮಾಡಿರುವುದು ಕಂಡು ಬರುತ್ತದೆ. ಲೋಕಾಯುಕ್ತ ಅಧಿಕಾರಿಗಳು ವಿವಿಧ ದಾಖಲೆಗಳನ್ನು ವಶಪಡಿಸಿ ಕೊಂಡಿದ್ದು ತನಿಖೆ ಮುಂದುವರಿಯುತಿದೆ.

ಕುಮಾರ್ ಅವರ ಕೊರಂಗ್ರಪಾಡಿ ಮನೆಯಲ್ಲಿ ಐಶಾರಾಮಿ ಕಾರು, ಚಿನ್ನಾಭರಣ, ಬೆಳೆಬಾಳುವ ಪೀಠೋಪಕರಣ ಗಳು, ಲಕ್ಷಾಂತರ ರೂ. ನಗದು ಹಾಗೂ ಹೊರಜಿಲ್ಲೆಗಳಲ್ಲಿರುವ ನಿವೇಶನಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!