ಉದ್ಯಾವರ: ಸದಿಯ ಸಾಹುಕಾರ್ ರಸ್ತೆಯ ನಾಮಫಲಕ ಅನಾವರಣ

ಉದ್ಯಾವರ: ಉದ್ಯಾವರ ಜಯಲಕ್ಷ್ಮಿ ಸಿಲ್ಕ್ಸ್ ನಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾಪು ಶಾಸಕ ಲಾಲಾಜಿ ಮೆಂಡನ್ ರವರು ಮೊಗವೀರ ಮುಖಂಡ,  ಕೊಡುಗೈದಾನಿಯಾದ ದಿ. ಸದಿಯ ಸಾಹುಕಾರ್ ಹೆಸರಿನಲ್ಲಿ ಸದಿಯ ಸಾಹುಕಾರ್ ರಸ್ತೆ ಎಂದು ನಾಮಕರಣ ಮಾಡಿ, ಫಲಕ ಅನಾವರಣ ಗೊಳಿಸಿದರು.


ಈ ಸಂದರ್ಭದಲ್ಲಿ ಸಾಹುಕಾರ್ ಕುಟುಂಬದ ಗಣೇಶ್ ಯು ಹಾಗು ಸುರೇಶ್ ರವರು ಶಾಸಕರನ್ನು ಗೌರವಿಸಿದರು.  ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಪಂಚಾಯತ್ ನಿಕಟಪೂರ್ವ ಸದಸ್ಯರಾದ ಲಾರೆನ್ಸ್ ಡೇಸಾ, ವಿಲ್ಸನ್ ರಾಜ್ ಕುಮಾರ್, ಬಿ.ಜೆ.ಪಿ ಕಾಪು ಕ್ಷೇತ್ರದ ಕಾರ್ಯದರ್ಶಿ  ರಾಜೇಶ್ ಕುಂದರ್, ಕಾಪು ಹಿಂದುಳಿದ ವರ್ಗದ ಕಾರ್ಯದರ್ಶಿ ರವಿ ಕೋಟ್ಯಾನ್, ಜಯಲಕ್ಷ್ಮಿ ಸಿಲ್ಕ್ಸ್ ನ ಮಾಲಕ ರವೀಂದ್ರ ಹೆಗ್ಡೆ, ವಿಹಿಂಪ ಉಪಾಧ್ಯಕ್ಷ ಸಂತೋಷ ಬೈರಂಪಳ್ಳಿ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಮಾರ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಚಿನ್ ಬೊಳ್ಜೆ, ಕಾಪು ಕ್ಷೇತ್ರ  ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಪಿತ್ರೋಡಿ, ಶರತ್ ಉದ್ಯಾವರ, ಜಗನ್ ಮೋಹನ್, ಬಾಲಕೃಷ್ಣ, ಯೋಗಿಶ್, ಶೇಖರ್ ಕುಂದರ್, ರಮಾನಂದ್ , ಸುಂದರ್ ಕೋಟ್ಯಾನ್ , ಶಶಿಕಲಾ ಶಿವಶಂಕರ್, ಉಮೇಶ್ ಯು, ದೀಪಕ್ ಯು, ಉಪಸ್ಥಿತರಿದ್ದರು. 


ಸದಿಯ ಸಾಹುಕಾರ್ ಮನೆತನದ ಶಿವಶಂಕರ್ ಸ್ವಾಗತಿಸಿ ಪ್ರಸ್ತಾಪಿಸಿದರು. ನಯನಾ ಗಣೇಶ್ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!