ಈ ಶಾಸಕ ನಾಲ್ಕು ಬಾರಿ ಆಯ್ಕೆಯಾಗಿ ಪಡೆದುಕೊಂಡದ್ದಕ್ಕಿಂತ ಕಳದುಕೊಂಡದ್ದೇ ಹೆಚ್ಚು….

ನಾಲ್ಕು ಬಾರಿ ಶಾಸಕರಾಗಿರುವ ಹೊಟೇಲ್ ಉದ್ಯಮಿಯೊರ್ವರು ತಾವು ರಾಜಕೀಯದಲ್ಲಿ ಗಳಿಸಿದ್ದಕ್ಕಿಂತ ಕಳಕೊಂಡದ್ದೇ ಹೆಚ್ಚು ಎನ್ನಬಹುದು.

ಆ ರಾಜಕಾರಣಿ ಬೇರೆ ಯಾರು ಅಲ್ಲ ಬೈಂದೂರು ಕ್ಷೇತ್ರದಲ್ಲಿ ಏಳು ಬಾರಿ ಸ್ಪರ್ಧಾ ಕಣಕ್ಕೆ ಇಳಿದು ನಾಲ್ಕು ಬಾರಿ ಜಯದ ಮಾಲೆ ಹಾಕಿಕೊಂಡ ಕೆ.ಗೋಪಾಲ್ ಪೂಜಾರಿ.

ಉಡುಪಿ ಸಹಿತ ಬೆಂಗಳೂರಿನಲ್ಲಿ ಐದಾರು ಹೊಟೇಲ್‌ಗಳನ್ನು ನಡೆಸುತ್ತಿದ್ದ ಇವರು ಪ್ರತಿ ಚುನಾವಣೆಗೆ ಹೊಟೇಲ್ ಒಂದನ್ನು ಮಾರಾಟ ಮಾಡಿ ಚುನಾವಣೆಯ ಖರ್ಚಿಗೆ ಹಣ ಹೊಂದಿಸುತ್ತಾರೆ ಎಂದು ಅವರ ಆಪ್ತರು ಹೇಳಿಕೊಳ್ಳುತ್ತಾರೆ.

ಅವರ ಆಸ್ತಿ ವಿವರ….

ಗೋಪಾಲ ಪೂಜಾರಿ (67) ಅವರ ಆದಾಯ 70.23 ಲಕ್ಷ ರೂ. ಇವೆಲ್ಲವೂ ಚರಾಸ್ಥಿಗಳೇ. ಅವರ ಬಳಿ ಯಾವುದೇ ಸ್ಥಿರಾಸ್ಥಿ ಇಲ್ಲ. ಆದರೆ ವಿವಿಧ ಬ್ಯಾಂಕುಗಳಲ್ಲಿ ಒಟ್ಟು 45.23 ಲಕ್ಷರೂ. ಸಾಲವನ್ನು ಹೊಂದಿದ್ದಾರೆ.

ಗೋಪಾಲ ಪೂಜಾರಿ ಅವರ ಪತ್ನಿ ಮಮತಾ ಪೂಜಾರಿ ಅವರಲ್ಲಿರುವ ಚರಾಸ್ಥಿಯ ಮೌಲ್ಯ 46.67 ಲಕ್ಷ ರೂ.ಗಳಾದರೆ, ಸ್ಥಿರಾಸ್ಥಿ ಮೌಲ್ಯ 85 ಲಕ್ಷ ರೂ.ಗಳೆಂದು ತಿಳಿಸಲಾಗಿದೆ. ಅಲ್ಲದೇ ಅವರು 35 ಲಕ್ಷ ರೂ.ಸಾಲವನ್ನೂ ಹೊಂದಿದ್ದಾರೆ.

ಗೋಪಾಲ ಪೂಜಾರಿ ಅವರು 7.80 ಲಕ್ಷ ರೂ. ನಗದು ಹೊಂದಿದ್ದರೆ, ಪತ್ನಿ ಬಳಿ 1.15 ಲಕ್ಷ ರೂ.ನಗದು ಇದೆ. ಮೂರು ಪ್ರಕರಣಗಳನ್ನು ಮಣಿಪಾಲ, ಬೆಂಗಳೂರು ಠಾಣೆಗಳಲ್ಲಿ ಹೊಂದಿರುವ ಗೋಪಾಲ ಪೂಜಾರಿ ಬಳಿ ಫೋರ್ಡ್ ಹಾಗೂ ಇನ್ನೋವಾ ಕಾರುಗಳಿವೆ. ಆರು ಲಕ್ಷ ರೂ.ಮೌಲ್ಯದ 100ಗ್ರಾಂ ಚಿನ್ನವಿದೆ. ಪತ್ನಿ ಬಳಿ 45 ಲಕ್ಷ ರೂ. ಮೌಲ್ಯದ 750ಗ್ರಾಂ ಚಿನ್ನವಿದೆ.

Leave a Reply

Your email address will not be published. Required fields are marked *

error: Content is protected !!