ಉಡುಪಿಯಲ್ಲಿ ಹಣ ಸಾಗಾಟ ಆರೋಪ- ಅಣ್ಣಾಮಲೈ ಆಗಮಿಸಿದ ಹೆಲಿಕಾಪ್ಟರ್ ತಪಾಸಣೆ

ಉಡುಪಿ: ಕರ್ನಾಟಕ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ ತಮಿಳುನಾಡು ಇದರ ಅಧ್ಯಕ್ಷರಾದ ಕೆ.ಅಣ್ಣಾಮಲೈ ಇಂದು ಉಡುಪಿ ಜಿಲ್ಲೆಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ್ದು, ಈ ಸಂದರ್ಭದಲ್ಲಿ ಸದ್ರಿ ಹೆಲಿಕಾಪ್ಟರ್ ಆದಿಉಡುಪಿಯ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆಗಿರುತ್ತದೆ.

ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ MCC ನೋಡೆಲ್ ಅಧಿಕಾರಿ ಹಾಗೂ FST ತಂಡಗಳು ಉಪಸ್ಥಿತರಿದ್ದು, ಹೆಲಿಕಾಪ್ಟರ್‌ನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ MCC ಉಲ್ಲಂಘನೆಯ ಯಾವುದೇ ಅಂಶಗಳು ಕಂಡುಬಂದಿರುವುದಿಲ್ಲ ಎಂದು ಪ್ರಕಟಣೆ ನೀಡಿದ್ದಾರೆ.

ಚುನಾವಣಾ ಅಧಿಕಾರಿಗಳ ಪ್ರಕಟಣೆಯ ಸಾರಾಂಶ

ಕನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಶ್ರೀ ಅಣ್ಣಾಮಲೈ, ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ ತಮಿಳುನಾಡು ಇವರು ದಿನಾಂಕ:17-04-2023 ರ ಪೂರ್ವಾಹ್ನ 9.55 ಕ್ಕೆ ಹೆಲಿಕಾಪ್ಟರ್ ಮುಖಾಂತರ ಉಡುಪಿಗೆ ಆಗಮಿಸಿದ್ದು, ಸದರಿಯವರು ಬಂದ ಹೆಲಿಕಾಪ್ಟರ್ ಅನ್ನು ಹಾಗೂ ಅವರ ಬಳಿ ಬ್ಯಾಗ್ ಇದ್ದು, ಸದ್ರಿ ಬ್ಯಾಗನ್ನು FST- ||| ತಂಡದ ಮುಖ್ಯಸ್ಮರಾದ ಶ್ರೀ ರಾಘವೇಂದ್ರ ಮತ್ತು ಶ್ರೀಮತಿ ವಿಜಯಾ ಎಂಸಿಸಿ ನೋಡಲ್ ಅಧಿಕಾರಿ 120 ಉಡುಪಿ ವಿಧಾನಸಭಾ ಕ್ಷೇತ್ರ ಪರಿಶೀಲಿಸಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಹ ಯಾವುದೇ ಅಂಶಗಳು ಕಂಡುಬಂದಿರುವುದಿಲ್ಲ ಎಂದು ವರದಿ ನೀಡಿರುತ್ತಾರೆ.

ಹೆಲಿಪ್ಯಾಡ್ ನಿಂದ ಕಲಂಕ ಮಾರ್ಗವಾಗಿ ನೇರವಾಗಿ “The Ocean Pearl ” ಹೋಟೆಲ್ ಗ ಆಗಮಿಸಿದ್ದು, ಅಲ್ಲಿ ಅವರು ಪ್ರಯಾಣಿಸಿದ ವಾಹನವನ್ನು FST- || ತಂಡದ ಮುಖ್ಯಸ್ಥರಾದ ಶ್ರೀ ರೋಷನ್ ಕುಮಾರ್ ಮತ್ತು GST ತಂಡದವರು ತಪಾಸಣೆ ನಡೆಸಿ ವಾಹನದಲ್ಲಿ ಒಂದು ಬ್ಯಾಗ್ ಇದ್ದು ಅದರಲ್ಲಿ 2 ಜೊತೆ ಬಟ್ಟೆಗಳು ಹಾಗೂ ಕುಡಿಯುವ ನೀರಿನ ಬಾಟಲ್ ಗಳು ಮಾತ್ರ ಇರುವುದನ್ನು ಗಮನಿಸಿ ವರದಿಯನ್ನು ಸಲ್ಲಿಸಿರುತ್ತಾರೆ. ಈ ಬಾರಿಯೂ ಕೂಡಾ ಮಾದರಿ ನೀತಿ ಸಂಹಿತ ಉಲ್ಲಂಘನೆಯಾದಂತಹ ಅಂಶಗಳು ಕಂಡು ಬಂದಿರುವುದಿಲ್ಲ ಎಂದು ವರದಿ ನೀಡಿರುತ್ತಾರೆ

ತದನಂತರ ಆದೇ ವಾಹನದಲ್ಲಿ 121- ಕಾಪು ವಿಧಾನಸಭಾ ಕ್ಷೇತ್ರಕ್ಕೆ, ತೆರಳುವುದಾಗಿ ತಿಳಿಸಿ ಹೊಟೇಲ್ ನಿಂದ ನಿರ್ಗಮಿಸಿದರು, ಉಡುಪಿ ಕಾಪು ಮಾರ್ಗದಲ್ಲಿ ಉದ್ಯಾವರ ಚೆಕ್ ಪೋಸ್ಟ್ ನ SST ತಂಡವು ಮತ್ತೊಮ್ಮೆ ಪರಿಶೀಲನೆ ಮಾಡಿದ್ದು ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಯಾಗಿರುವುದು ಕಂಡು ಬಂದಿರುವುದಿಲ್ಲ. ಎಂದು ತಿಳಿಸಿರುತ್ತಾರೆ.

ಅಪರಾಹ್ನ ಸದ್ರಿಯವರು ಸುಮಾರು 2 ಗಂಟೆಗೆ ಕಡಿಯಾಳಿ ಬಳಿ ಇರುವ ” The Ocean Perl ” ಹೋಟೆಲ್ ಗೆ ಆಗಮಿಸಿ ತಾವು ತಂಗಿರುವ ಕೊಠಡಿಯಲ್ಲಿ ಇರುವ ಸಂದರ್ಭದಲ್ಲಿ ಮತ್ತೊಮ್ಮೆ ಇಡೀ ಕೊಠಡಿ ಮತ್ತು ಬ್ಯಾಗ್ ನ್ನು ಪರಿಶೀಲಿಸಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಹ ಯಾವುದೇ ಅಂಶಗಳು ಕಂಡುಬಂದಿರುವುದಿಲ್ಲ. ಎಂದು ವರದಿ ನೀಡಿರುತ್ತಾರೆ. ನಂತರ ಅದೇ ವಾಹನದಲ್ಲಿ ಸದರಿಯವರು ಚಿಕ್ಕಮಗಳೂರಿಗೆ ತೆರಳುವುದಾಗಿ ತಿಳಿಸಿ ಹೊಟೇಲ್ ನಿಂದ ನಿರ್ಗಮಿಸಿರುತ್ತಾರೆ.

ಒಟ್ಟಾರೆಯಾಗಿ ಶ್ರೀ ಅಣ್ಣಾಮಲೈ, ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ ತಮಿಳುನಾಡು ಇವರು 120-ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿರುವುದರಿಂದ ನಿರ್ಗಮನದವರೆಗೂ ಚುನಾವಣಾ ಮಾದರಿ ನೀತಿ ಸಂಹಿತೆಯ ನಿಯಮಾನುಸಾರ ಹಂತ ಹಂತವಾಗಿ ಪರಿಶೀಲನೆ ನಡೆಸಿದ್ದು ಯಾವುದೇ ಲೋಪಗಳು ಕಂಡುಬಂದಿರುವುದಿಲ್ಲ ಎಂಬ ವಿಷಯವನ್ನು ತಿಳಿಸಿದ.

Leave a Reply

Your email address will not be published. Required fields are marked *

error: Content is protected !!