ಡಿಸ್ಚಾರ್ಜ್’ಗೂ ಮುನ್ನ ಕೊರೋನಾ ಪರೀಕ್ಷೆ ಕಡ್ಡಾಯ: ಹೊಸ ಮಾರ್ಗ ಸೂಚಿಯಲ್ಲಿ ಏನಿದೆ ಗೊತ್ತಾ?
ನವದೆಹಲಿ: ಕೊರೋನಾ ಸೋಂಕಿತರಿಗೆ ಪರಿಷ್ಕೃತ ಡಿಸ್ಚಾರ್ಜ್ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಮಂಗಳವಾರ ಬಿಡುಗೆಡ ಮಾಡಿದೆ.
ಮಾರ್ಗಸೂಚಿಗಳಲ್ಲಿರುವ ಕೆಲವು ಅಂಶಗಳು ಇಂತಿವೆ…
- ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವುದಕ್ಕೂ ಮುನ್ನ 3 ದಿನಗಳ ಯಾವುದೇ ರೀತಿಯ ಜ್ವರ ಹಾಗೂ ಸೋಂಕಿನ ಲಕ್ಷಣಗಳು ಕಾಣಬಾರದು.
- ಪ್ರತೀ ದಿನ ರೋಗಿಯ ದೇಹದ ತಾಪಮಾನ, ನಾಡಿ ಮಿಡಿತವನ್ನು ಪರೀಕ್ಷೆ ಮಾಡಬೇಕು.
- ಯಾವುದೇ ಲಕ್ಷಣಗಳು ಗೋಚರಿಸದೆ ಇದ್ದಲ್ಲಿ 10 ದಿನಗಳ ಬಳಿಕ ಡಿಸ್ಚಾರ್ಜ್ ಮಾಡಬಹುದಾಗಿದೆ.
- ಎಲ್ಲಾ ಕೊರೋನಾ ಸೋಂಕಿತರು, ಚಿಕಿತ್ಸೆಗಾಗಿಯೇ ಮೀಸಲಟ್ಟಿರುವ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು.
- ಯಾವುದೇ ಸರ್ಕಾರಿ ಅಥವಾ ಖಾಸಗಿ ಕೊರೋನಾ ಹೆಲ್ತ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಬಹುದಾಗಿದೆ.
- ಬಿಡುಗಡೆ ಮಾಡುವ ನಾಲ್ಕು ದಿನಗಳ ಹಿಂದಿನಿಂದ ಕೃತಕ ಆಮ್ಲಜನಕದ ಸಪೋರ್ಟ್ ಇರಬಾರದು.
- ಕೊರೋನಾ ಲಕ್ಷಣಗಳು ಕಂಡು ಬರದಿದ್ದರೆ, ಮೂರು ದಿನಗಳ ಬಳಿಕ ಆರ್’ಟಿ ಹಾಗೂ ಪಿಸಿಆರ್ ಪರೀಕ್ಷೆ ನಡೆಸಬೇಕು. ರಿಪೋರ್ಟ್ ನಲ್ಲಿ ನೆಗೆಟಿವ್ ಎಂದು ಬಂದರೆ ಮಾತ್ರ ಅವನ್ನು ಬಿಡುಗಡೆ ಮಾಡಲಾಗುತ್ತದೆ.
- ಆಸ್ಪತ್ರೆಯಲ್ಲಿರುವಾಗ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೋನಾ ಪಾಸಿಟಿವ್ ಇದ್ದರೆ ಅವರಿಗೆ ಆರ್’ಟಿ ಪಿಸಿಆರ್ ಟೆಸ್ಟ್ ಮಾಡಿಸಬೇಕು. ಒಮ್ಮೆ ವರದಿಯಲ್ಲಿ ನೆಗೆಟಿವ್ ಬಂದರೂ ಕೂಡ ವಾರದ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು.
- ಆಸ್ಪತ್ರೆಯಿಂದ ಬಿಡುಗಡೆಯಾದ ಸೋಂಕಿತರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಲಾಗುತ್ತದೆ.