ದ.ಕ -781,ಉಡುಪಿ- 292 ಸಹಿತ ರಾಜ್ಯದ 7361 ಪಾತಕಿಗಳ ರೌಡಿ ಶೀಟರ್ ಪಟ್ಟಿ ತೆರವು

ಬೆಂಗಳೂರು ಫೆ.19(ಉಡುಪಿ ಟೈಮ್ಸ್ ವರದಿ): ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲಿಯೇ ರಾಜ್ಯದ 7,361ಪಾತಕಿಗಳನ್ನು ಪೊಲೀಸ್ ಇಲಾಖೆ ರೌಡಿಶೀಟಿನಿಂದ ಕೈಬಿಟ್ಟಿದೆ ಎಂದು ವರದಿಯಾಗಿದೆ.

ರಾಜ್ಯ ಸರ್ಕಾರವೇ ಒದಗಿಸಿದ ಅಧಿಕೃತ ಮಾಹಿತಿಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಕರ್ನಾಟಕ ಪೊಲೀಸ್ ಇಲಾಖೆ (2023ರ ಜನವರಿ ಹಾಗೂ ಫೆಬ್ರವರಿ ತಿಂಗಳು) 7361 ಪಾತಕಿಗಳನ್ನು ರೌಡಿಪಟ್ಟಿಯಿಂದ ಕೈಬಿಟ್ಟಿದ್ದು, ಒಟ್ಟು 11 ಜಿಲ್ಲೆಗಳ ಪೈಕಿ ಕರಾವಳಿಯ ಜಿಲ್ಲೆಗಳಾದ ಮಂಗಳೂರು(ದ.ಕ) ಅಗ್ರ ಸ್ಥಾನದಲ್ಲಿದ್ದು ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನದಲ್ಲಿದೆ, ಉಡುಪಿ ಜಿಲ್ಲೆ 8ನೇ ಸ್ಥಾನದಲ್ಲಿದೆ. ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ.

ಇನ್ನು ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಮಂದಿಯನ್ನು ರೌಡಿಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಮಾಹಿತಿ ಹೀಗಿದೆ.

ಮಂಗಳೂರು -781 ಮಂದಿ

ಮಂಡ್ಯ-610 ಮಂದಿ

ಉತ್ತರ ಕನ್ನಡ – 529 ಮಂದಿ

ಬೀದರ್ – 519 ಮಂದಿ

ಮೈಸೂರು – 350 ಮಂದಿ

ಹಾಸನ – 350 ಮಂದಿ

ಚಿತ್ರದುರ್ಗ – 319 ಮಂದಿ

ಉಡುಪಿ – 292 ಮಂದಿ

ಹಾವೇರಿ – 266 ಮಂದಿ

ವಿಜಯಪುರ – 215 ಮಂದಿ

ಶಿವಮೊಗ್ಗ – 207 ಮಂದಿ

Leave a Reply

Your email address will not be published. Required fields are marked *

error: Content is protected !!