ಸುರತ್ಕಲ್: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ: “ರಾಹಿ ದೃಷ್ಟಿ ಕೇಂದ್ರ” ಉದ್ಘಾಟನೆ

ಸುರತ್ಕಲ್ ಫೆ.17 (ಉಡುಪಿ ಟೈಮ್ಸ್ ವರದಿ): ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವತಿಯಿಂದ ಸುರತ್ಕಲ್ ಎಂ.ಆರ್.ಪಿ.ಎಲ್ ರಸ್ತೆಯ ಲಿಶಾ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಿಸಿರುವ “ರಾಹಿ ದೃಷ್ಟಿ ಕೇಂದ್ರ” ಉದ್ಘಾಟನೆಗೊಂಡಿತು.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ(ಪ್ರಭಾರ) ಡಾ. ರಾಜೇಶ್ ಬಿ.ವಿ ಯವರು ದೃಷ್ಟಿ ಕೇ0ದ್ರವನ್ನು ಉದ್ಘಾಟಿಸಿದರು.  ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶ0ಕರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಈ ವೇಳೆ ಮುಖ್ಯ ಅತಿಥಿಗಳಾಗಿ ಅಲೆರ್ಗನ್ ಇ0ಡಿಯಾದ ಮೇನೇಜಿ0ಗ್ ಡೈರೆಕ್ಟರ್ ಸುರೇಶ್ ಪಟ್ಟ0ತಿಲ್, ಶ್ರೀರಾಮ್ ಪ್ರಸಾದ್, ಸೈಟ್ ಸೇವರ್ಸ್ ಇ0ಡಿಯಾದ ಕಾರ್ಪೋರೇಟ್ ಪಾರ್ಟ್ನರ್‍ಶಿಪ್ ಮುಖ್ಯಸ್ಥ ಜತಿನ್ ತಿವಾರಿ, ಸಯಾ0ತಿ ಬಿಟ್, ಚ0ದ್ರಶೇಖರ್ ಮಾಥಾ, ಮ0ಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭ0ಡಾರಿ, ಸುರತ್ಕಲ್ ಆರೋಗ್ಯ ಕೇ0ದ್ರದ ವೈದ್ಯಾಧಿಕಾರಿ ಡಾ. ಶ್ರೀವತ್ಸ ಭಟ್, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿ ರಘುರಾಮ್ ರಾವ್, ರಶ್ಮಿ ಕೃಷ್ಣಪ್ರಸಾದ್ ಭಾಗವಹಿದ್ದರು.

ಈ ಸಂದರ್ಭದಲ್ಲಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು, ಪ್ರಸಾದ್ ನೇತ್ರಾಲಯದ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಖಾದರ್, ಡಾ. ಶರತ್ ಹೆಗ್ದೆ, ಆಡಳಿತಾಧಿಕಾರಿ ಮಧ್ವ ವಲ್ಲಭ ಆಚಾರ್ಯ, ನೇತ್ರ ತಜ್ಞರಾದ ಡಾ. ವಿಕ್ರಮ್ ಜೈನ್, ಡಾ. ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಸೈಟ್ ಸೇವರ್ಸ್ ಇ0ಡಿಯಾ ಇವರರಾಷ್ಟ್ರೀಯ ಟ್ರಕ್ ಚಾಲಕರ ದೃಷ್ಟಿ ಆರೋಗ್ಯ ತಪಾಸಣಾ ಕಾರ್ಯಕ್ರಮದ ಅ0ಗವಾಗಿ ಟ್ರಕ್ ಚಾಲಕರ ನೇತ್ರ ಉಚಿತ ಪರೀಕ್ಷೆ, ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮದಡಿಯಲ್ಲಿ ಆರ0ಭವಾದ ಈ ಕೇ0ದ್ರದಲ್ಲಿ ಚಾಲಕರ ದೃಷ್ಟಿ ಆರೋಗ್ಯದ ಮಹತ್ವವನ್ನು ಅವರಿಗೆ ಮನದಟ್ಟು ಮಾಡಿ ಅವರಿಗೆ ಉಚಿತ ನೇತ್ರ ಸೇವೆ ನೀಡಲಾಗುತ್ತದೆ. ಅಲೆರ್ಗನ್ ಇ0ಡಿಯಾ ಇವರ ಆರ್ಥಿಕ ಪ್ರಾಯೋಜಕತ್ವದಲ್ಲಿ ಸೈಟ್ ಸೇವರ್ಸ್ ಇ0ಡಿಯಾ ಸ0ಸ್ಥೆಯು ಪ್ರಸಾದ್ ನೇತ್ರಾಲಯ ಮುಖಾ0ತರ ಈ ಕೇ0ದ್ರವನ್ನು ನಡೆಸುತ್ತಿದೆ.

Leave a Reply

Your email address will not be published. Required fields are marked *

error: Content is protected !!