ಹಾವಂಜೆ ಗ್ರಾಮ ವಿಕಾಸ ಸಮಿತಿ- ಪರೀಕ್ಷೆ ಭಯ ಬೇಡ ಕಾರ್ಯಕ್ರಮ

ಹಾವಂಜೆ, ಫೆ. 12: ಹಾವಂಜೆ ಗ್ರಾಮ ವಿಕಾಸ ಸಮಿತಿ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ‘ಎಸ್.ಎಸ್.ಎಲ್.ಸಿ ಪರೀಕ್ಷೆ ಭಯ ಬೇಡ’ ಕಾರ್ಯಕ್ರಮ ಭಾನುವಾರ ಹಾವಂಜೆಯ ಶ್ರೀ ಮಂಜುನಾಥ ಸಭಾಭವನದಲ್ಲಿ ನಡೆಯಿತು. ಉಪನ್ಯಾಸಕ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಗಣೇಶ್ ಪ್ರಸಾದ್ ಜಿ. ನಾಯಕ್ ಉದ್ಘಾಟನೆ ನೆರವೇರಿಸಿ ಸಂಪನ್ಮೂಲ ಉಪನ್ಯಾಸ ನೀಡಿದರು.

ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ವೇಳಾಪಟ್ಟಿ ಹಾಕಿ ಅಧ್ಯಯನ ನಡೆಸಿದರೆ ಪರಿಣಾಮಕಾರಿ ಫಲಿತಾಂಶವನ್ನು ನಿರೀಕ್ಷಿಸಬಹುದು. ಕೇವಲ ಬುದ್ಧಿವಂತಿಕೆಯಿಂದ ದೊಡ್ಡ ಮಟ್ಟಿನ ಬದಲಾವಣೆ ಅಸಾಧ್ಯ, ಬುದ್ಧಿವಂತಿಕೆ ಅಭಿವೃದ್ಧಿಪಡಿಸುವ ಜತೆಗೆ ಕಠಿಣ ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದರೆ ಯಶಸ್ಸಿನ್ನತ್ತ ಮುನ್ನುಗ್ಗಬಹುದು ಎಂದರು.

ಹಾವಂಜೆ ಗ್ರಾಮ ವಿಕಾಸ ಸಮಿತಿಯ ಸಂಚಾಲಕ ಸತ್ಯನಾರಾಯಣ ಆಚಾರ್ಯ ಗೋಳಿಕಟ್ಟೆ, ಗ್ರಾಮ ಪಂಚಾಯತ್ ಸದಸ್ಯ ಗುರುರಾಜ್ ಕಾರ್ತಿಬೈಲು, ಪ್ರಮೋದ್ ಹಾವಂಜೆ, ಹಿಂ.ಜಾ.ವೇ ಹಾವಂಜೆ ಘಟಕ ಸಂಚಾಲಕ ಅಶೋಕ್ ಶೇಡಿಗುಳಿ, ಹಾವಂಜೆ ಗ್ರಾಮ ವಿಕಾಸ ಸಮಿತಿ ವಿದ್ಯಾರ್ಥಿ ಪ್ರಮುಖರಾದ ಆದರ್ಶ್, ಅಶ್ವಿನಿ, ಸ್ವಚ್ಛತಾಸಮಿತಿ ಪ್ರಮುಖ್ ಅಜಿತ್ ಆಚಾರ್ಯ ಕಾರ್ತಿಬೈಲು, ಮಂಜುನಾಥ್, ಶ್ವೇತಾ ಉಪಸ್ಥಿತರಿದ್ದರು. ಹಾವಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಗ್ರಾಮ ವಿಕಾಸ ಸಮಿತಿಯ ಸದಸ್ಯರಾದ ಅಜಿತ್ ಗೋಳಿಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!