ಮುಸ್ಲಿಂ ಗಂಡು ಮಕ್ಕಳ ಮುಂಜಿ ರದ್ದು ಪಡಿಸಲು ಹೈಕೋರ್ಟ್’ಗೆ ಅರ್ಜಿ

ಮುಸ್ಲಿಂ ಹುಡುಗರಲ್ಲಿ ಮುಂಜಿ ಮಾಡಿಸುವ ಸಂಪ್ರದಾಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಧಾರ್ಮಿಕೇತರ ಸಂಘವೊಂದು ಈ ಮನವಿಯನ್ನು ಸಲ್ಲಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ಅಭ್ಯಾಸವನ್ನು ಚಿಕ್ಕ ಮಕ್ಕಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸಂಘವು ತನ್ನ ಮನವಿಯಲ್ಲಿ ಹೇಳಿದೆ.

ಮಕ್ಕಳ ಮೇಲೆ ಬಲವಂತವಾಗಿ ಮುಂಜಿ ಮಾಡಲಾಗುತ್ತಿದೆ. ಅದು ಅವರ ಆಯ್ಕೆಯಲ್ಲ ಮತ್ತು ಇದು ಅಂತರರಾಷ್ಟ್ರೀಯ ಒಪ್ಪಂದಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಕೃತ್ಯವನ್ನು “ಕ್ರೂರ, ಅಮಾನವೀಯ ಮತ್ತು ಅನಾಗರಿಕ’ ಎಂದು ಅರ್ಜಿದಾರರು ಹೇಳಿದ್ದಾರೆ.

ಚಿಕಿತ್ಸಕವಲ್ಲದ ಮುಂಜಿಯನ್ನು ಕಾನೂನುಬಾಹಿರವೆಂದು ಘೋಷಿಸಿ, ಅದನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡಿ ಮತ್ತು ಅದರ ವಿರುದ್ಧ ಶಾಸನಬದ್ಧ ಕಾನೂನನ್ನು ತರಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!