ಮಣಿಪಾಲ/ಕುಂದಾಪುರ: ಮಾದಕ ವಸ್ತು ಸೇವನೆ- ಮೂವರು ವಶಕ್ಕೆ

ಮಣಿಪಾಲ/ಕುಂದಾಪುರ, ಫೆ.5(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿರುವ ಮೂರು ಪ್ರತ್ಯೇಕ ಪ್ರಕರಣ ಮಣಿಪಾಲ ಹಾಗೂ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸರಳಬೆಟ್ಟುವಿನ ಅಪಾರ್ಟಮೆಂಟ್‌ ವೊಂದರ ಬಳಿ ಸಾರ್ವಜನಿಕ ಸ್ಥಳದಲ್ಲಿ ಪ್ರಥಮೇಶ್ ಬಿ ಪೈ ನನ್ನು ಹಾಗೂ ಮೊಹಮ್ಮದ್ ಖೈಸ್ ಎಂಬಾತನನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಪೊಲೀಸರು ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಮತ್ತೊಂದೆಡೆ ಕುಂದಾಪುರ ಪೊಲೀಸರು ತಾಲೂಕಿನ ಜಪ್ತಿ ಗ್ರಾಮದ  ಬಸ್‌ ನಿಲ್ದಾಣ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಿರೀಶ್ ಮೊಗವೀರ ಎಂಬಾತನನ್ನು ವಶಕ್ಕೆ ಪಡೆದು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಗೆ ಒಳಪಡಿಸಿದ್ದಾರೆ.

ಈ ಮೂವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ 2 ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ1 ಸೇರಿ ಒಟ್ಟು 3 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!