ಎಚ್.ಎಮ್.ಎಮ್.ವಿ.ಕೆ.ಆರ್- ಶಿಕ್ಷಕ ಪುನಶ್ಚೇತನ ಕಾರ್ಯಗಾರ

ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಶಿಕ್ಷಕರಿಗಾಗಿ ” ಅ ಟಾಕ್ ಫಾರ್ ಟೀಚರ್ಸ್ ” ಎನ್ನುವ ಪುನಶ್ಚೇತನ ಕಾರ್ಯಗಾರ ನಡೆಯಿತು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಓರೆಕಲ್ ಜಿ.ಎಸ್.ಸಿ ಯಲ್ಲಿ ಸೀನಿಯರ್ ಕ್ಲೌಡ್ ಎನಲಿಸ್ಟ್ ಹನ್ಸೆಲ್ ಡಿ.ಸಿಲ್ವಾ ಮಾತನಾಡಿ, ಶಿಕ್ಷಕರಿಗೆ ಭಾಷೆಯ ಮೇಲಿನ ಹಿಡಿತ, ಶಿಕ್ಷಣ ಕ್ಷೇತ್ರದಲ್ಲಿ ಸಾಫ್ಟ್ ಸ್ಕಿಲ್ಸ್, ಹಾರ್ಡ್ ಸ್ಕಿಲ್ ಮತ್ತು ಹ್ಯೂಮನ್ ಸ್ಕಿಲ್ ಗಳ ಮಹತ್ವವನ್ನು ಬಹಳ ಅರ್ಥಪೂರ್ಣವಾಗಿ ವಿವರಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಗಾರದಲ್ಲಿ ಸಂಸ್ಥೆಯ ಉಪಪ್ರಾಂಶುಪಾಲೆ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ.ಎನ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್, ಪ್ರೌಢಶಾಲಾ ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ, ಕಿಂಡರ್ ಗಾರ್ಟನ್ ನ ಮುಖ್ಯ ಶಿಕ್ಷಕಿ ಲತಾ ಜಿ.ಭಟ್, ಶಿಕ್ಷಕ ಸಂಯೋಜಕಿ ಆರತಿ ಶೆಟ್ಟಿ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಸಂಸ್ಥೆಯ ವಿಲ್ಮಾ ಡಿ.ಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!