13 ಐಪಿಎಸ್ ಅಧಿಕಾರಿಗಳು ಮತ್ತು 40 ಡಿವೈಎಸ್ಪಿಗಳ ವರ್ಗಾವಣೆ

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಸೋಮವಾರ 13 ಐಪಿಎಸ್ ಅಧಿಕಾರಿಗಳು ಮತ್ತು 40 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಸಾಕಷ್ಟು ಸಂಖ್ಯೆಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದ್ದು, ಇಂದು 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ವರ್ಗಾವಣೆಗೊಂಡ 13 ಐಪಿಎಸ್ ಅಧಿಕಾರಿಗಳ ಪಟ್ಟಿ
ಕಾರ್ತಿಕ್​ ರೆಡ್ಡಿ- ರಾಮನಗರ ಪೊಲೀಸ್ ವರಿಷ್ಠಾಧಿಕಾರಿ
ವಿನಾಯಕ್ ಪಾಟೀಲ್-ಎಐಜಿಪಿ, ಬೆಂಗಳೂರು
ಸಂತೋಷ್ ಬಾಬು-ಎಸ್​​ಪಿ, ಗುಪ್ತಚರ ಇಲಾಖೆ
ದೇವರಾಜ್-ಡಿಸಿಪಿ, ಬೆಂಗಳೂರು ಉತ್ತರ ವಿಭಾಗದ ಡಿಸಿಪಿ
ಸಿರಿಗೌರಿ -ಎಸ್​​ಪಿ, ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್
ಟಿ.ಪಿ.ಶಿವಕುಮಾರ್ – ಎಸ್​ಪಿ, ಕೆಪಿಟಿಸಿಎಲ್​
​ಹೆಚ್​​.ಶೇಖರ್ – ಡಿಸಿಪಿ, ಕಾನೂನು ಸುವ್ಯವಸ್ಥೆ, ಬೆಳಗಾವಿ ನಗರ
ಪದ್ಮಿನಿ ಸಾಹೋ – ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ
ಪ್ರದೀಪ್ ಗುಂಟಿ -ಎಸ್​​ಪಿ, ಕಾರಾಗೃಹ ಇಲಾಖೆ
ಎಂ.ಎಸ್.ಗೀತಾ – ಎಸ್​​ಪಿ, ಪೊಲೀಸ್ ತರಬೇತಿ ಶಾಲೆ, ಮೈಸೂರು
ರಾಮರಾಜನ್- ಪೊಲೀಸ್ ವರಿಷ್ಠಾಧಿಕಾರಿ, ಕೊಡಗು
ರವೀಂದ್ರ ಕಾಶಿನಾಥ್ – ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
ಎಂ.ಎ.ಅಯ್ಯಪ್ಪ – ಎಸ್​​ಪಿ, ಗುಪ್ತಚರ ಇಲಾಖೆ

ಮಾತ್ರವಲ್ಲದೆ ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 40 ಡಿವೈಎಸ್​ಪಿಗಳನ್ನು ಸಹ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!