ವಾಷಿಂಗ್ಟನ್: ಮಂಜುಗಡ್ಡೆ ಕುಸಿತ- ಓರ್ವ ಮಹಿಳೆ ಸೇರಿ ಭಾರತ ಮೂಲದ ಮೂವರ ಮೃತ್ಯು

ವಾಷಿಂಗ್ಟನ್: ಹೆಪ್ಪುಗಟ್ಟಿದ ಸರೋವರದ ಮೇಲೆ ಸಂಚರಿಸುತ್ತಿದ್ದಾಗ ಮಂಜುಗಡ್ಡೆ ಕುಸಿದು, ಓರ್ವ ಮಹಿಳೆ ಸೇರಿ ಭಾರತ ಮೂಲದ ಮೂವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಅರಿಜೋನಾ ರಾಜ್ಯದ ಕೊಕೊನಿನೊ ಕೌಂಟಿಯ ವುಡ್ಸ್ ಕ್ಯಾನಿಯನ್ ಸರೋವರದಲ್ಲಿ ಈ ಅವಘಡ ಸಂಭವಿಸಿದೆ.

ಮೃತರನ್ನು ನಾರಾಯಣ ಮುದ್ದಣ(49), ಗೋಕುಲ್ ಮೆಡಿಸೆಟಿ(47) ಮತ್ತು ಹರಿತಾ ಮುದ್ದಣ ಎಂದು ಗುರುತಿಸಲಾಗಿದೆ. ಮೃತರು ಅರಿಜೋನಾದ ಚಾಂಡ್ಲರ್ ನಿವಾಸಿಗಳಾಗಿದ್ದು, ಭಾರತ ಮೂಲದವರಾಗಿದ್ದಾರೆ’ ಎಂದು ಕೊಕಿನಿನೊ ಕೌಂಟಿ ಪೊಲೀಸ್ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಸರೋವರಕ್ಕೆ ಬಿದ್ದ ಹರಿತಾ ಮುದ್ಧಣ ಅವರನ್ನು ಮೇಲೆತ್ತುವಲ್ಲಿ ರಕ್ಷಣಾ ಸಿಬ್ಬಂದಿಗಳು ಯಶಸ್ವಿಯಾಗಿತ್ತು. ಆದರೆ, ಚಿಕಿತ್ಸೆ ನೀಡಿದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಅಮೆರಿಕ ಮತ್ತು ಕೆನಡಾದ ಹಲವೆಡೆ ಶೀತ ಮಾರುತದ ಅಬ್ಬರ ಜೋರಾಗಿದ್ದು, ಸುಮಾರು 20 ಕೋಟಿ ಅಧಿಕ ಜನರು ಹೊಡೆತಕ್ಕೆ ಸಿಲುಕಿ ನಲುಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!