ಕೊಲ್ಲೂರು: ಜಡ್ಕಲ್’ನ ಯುವತಿ ನಾಪತ್ತೆ

ಕೊಲ್ಲೂರು ನ.6(ಉಡುಪಿ ಟೈಮ್ಸ್ ವರದಿ): ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ವಾಟೆಗುಂಡಿ ಎಂಬಲ್ಲಿಂದ ಯುವತಿಯೊಬ್ಬರು ನಾಪತ್ತೆಯಾಗಿದ್ದಾರೆ.

ವಿನುತಾ (29) ನಾಪತ್ತೆಯಾದವರು. ನ.5 ರಂದು ಮನೆಯಿಂದ ಯಾರಿಗೂ ಹೇಳದೇ ಹೋದವರು ಈ ತನಕ ಮನೆಗೆ ವಾಪಾಸ್ಸು ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ. ಇವರು ನಾಪತ್ತೆಯಾದ ದಿನ ವಿನುತಾ ಅವರು ನೀಲಿ ಮತ್ತು ಬಿಳಿ ಪಟ್ಟಿ ಇರುವ ಮುಕ್ಕಾಲು ನೈಟ್ ಪ್ಯಾಂಟ್ ಹಾಗೂ ಬೂದಿ ಬಣ್ಣದ ಟಿ- ಶರ್ಟ್ ಧರಿಸಿದ್ದರು. ಈ ಬಗ್ಗೆ ನಾಪತ್ತೆಯಾದವರ ಪತಿ ಚಂದ್ರ ಎಂಬವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

error: Content is protected !!