ಪಿಂಚಣಿ: ರೂ. 15 ಸಾವಿರದ ಗರಿಷ್ಠ ಮಿತಿ ರದ್ದು

ಬೆಂಗಳೂರು: ಪಿಂಚಣಿ ನಿಧಿಗೆ ಉದ್ಯೋಗಿಗಳು ತಮ್ಮ ಪೂರ್ಣ ವೇತನದ ಶೇ 8.33ರಷ್ಟನ್ನು ಪಾವತಿಸಲು ಸುಪ್ರೀಂ ಕೋರ್ಟ್‌ ಅವಕಾಶ ಕೊಟ್ಟಿದೆ. ತಿದ್ದುಪತಿ ಕಾಯ್ದೆಯನ್ನು ಎತ್ತಿ ಹಿಡಿದಿದೆ

ಉದ್ಯೋಗಿಗಳ ಪಿಂಚಣಿ ಯೋಜನೆ(ಇಪಿಎಸ್‌) 2014ರ ತಿದ್ದುಪಡಿಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಇ‍ಪಿಎಸ್‌ ಆಯ್ಕೆ ಮಾಡಿಕೊಂಡಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘದ ಸದಸ್ಯರು ತಮ್ಮ ಠೇವಣಿ ಯನ್ನು ಹೆಚ್ಚಿಸುವ ಅವಕಾಶವನ್ನು ನೀಡಲಾಗಿದೆ. ಈ ಆಯ್ಕೆಯನ್ನು ಪಡೆದುಕೊಳ್ಳಲು ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ.

2014ರ ಸೆಪ್ಟೆಂಬರ್‌ 1 ಅಥವಾ ಅದಕ್ಕೂ ಮೊದಲಿನಿಂದಲೇ ಇ‍ಪಿಎಸ್‌ನ ಸದಸ್ಯರಾಗಿರುವವರು ತಮ್ಮ ಪೂರ್ಣ ವೇತನದ ಶೇ 8.33ರಷ್ಟನ್ನು ವಂತಿಗೆಯಾಗಿ ಪಾವತಿಸಬಹುದು. ಈವರೆಗೆ ಗರಿಷ್ಠ 15,000 ವೇತನಕ್ಕೆ ಮಾತ್ರ ಶೇ 8.33ರಷ್ಟು ವಂತಿಗೆ ಪಾವತಿಸಲು ಅವಕಾಶ ಇತ್ತು.

ತಿಂಗಳಿಗೆ ₹15,000ಕ್ಕಿಂತ ಹೆಚ್ಚಿನ ವೇತನಕ್ಕೆ  ಹೆಚ್ಚುವರಿಯಾಗಿ ಶೇ 1.16ರಷ್ಟು ವಂತಿಗೆ ಪಾವತಿಸಬೇಕು ಎಂಬುದು ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಇತರ ಅವಕಾಶಗಳ ಕಾಯ್ದೆ–1952ರ ಉಲ್ಲಂಘನೆಯಾಗುತ್ತದೆ ಎಂದಿದೆ. ಹಾಗಾಗಿ ಈ ಅವಕಾಶವನ್ನು ರದ್ದುಪಡಿಸಲಾಗಿದೆ. 

2014ರ ತಿದ್ದುಪಡಿ ಏನು ಹೇಳುತ್ತದೆ?: ಇಪಿಎಸ್‌ಗೆ 2014ರ ಆಗಸ್ಟ್‌ನಲ್ಲಿ ತಿದ್ದುಪಡಿ ಮಾಡಲಾಯಿತು. ಪಿಂಚಣಿಯ ಗರಿಷ್ಠ ವೇತನವನ್ನು ತಿಂಗಳಿಗೆ ₹15,000ಕ್ಕೆ ಏರಿಸಿತು. ಇಪಿಎಸ್‌ನ ಸದಸ್ಯರು ಮತ್ತು ಉದ್ಯೋಗದಾತರು ಇಪಿಎಸ್‌ಗಾಗಿ ತಿಂಗಳ ವೇತನದ ಶೇ 8.33ರಷ್ಟನ್ನು ವಂತಿಗೆ ನೀಡಲು ಅವಕಾಶ ಇದೆ. ಆದರೆ, ತಿಂಗಳಿಗೆ ₹15,000ಕ್ಕಿಂತ ಹೆಚ್ಚಿನ ವೇತನ ಪಡೆಯುವವರು ಹೆಚ್ಚುವರಿ ವೇತನದ ಶೇ 1.16ರಷ್ಟನ್ನು ವಂತಿಗೆ ರೂಪ‍ದಲ್ಲಿ ನೀಡಬೇಕು.

Leave a Reply

Your email address will not be published. Required fields are marked *

error: Content is protected !!