ಬ್ರಹ್ಮಾವರ: ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ವ್ಯಕ್ತಿ ನಾಪತ್ತೆ

ಬ್ರಹ್ಮಾವರ ನ.4(ಉಡುಪಿ ಟೈಮ್ಸ್ ವರದಿ): ತಾಲೂಕಿನ ದೂಪದ ಕಟ್ಟೆಯ ರಸ್ತೆಯ ಬದಿಯಲ್ಲಿ ತಮ್ಮ ಸ್ಕೂಟರ್ ನಿಲ್ಲಿಸಿ ವ್ಯಕ್ತಿಯೊಬ್ಬರು ನ.1 ರಿಂದ ನಾಪತ್ತೆಯಾಗಿದ್ದಾರೆ.
ಬ್ರಹ್ಮಾವರದ ಹಾರಾಡಿ ಗ್ರಾಮದ ದಯಾನಂದ ನಾಪತ್ತೆಯಾದವರು.
ದಯಾನಂದ ಅವರು ಇತ್ತೀಚಿಗೆ ವಿಪರೀತ ಮದ್ಯ ಸೇವನೆ ಮಾಡಿಕೊಂಡು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಅ.30 ರಂದು ಕೂಡಾ ಕುಡಿದು ಬಂದು ಪತ್ನಿ ಸಂಗೀತಾರೊಂದಿಗೆ ಹಾಗೂ ಮನೆಯವರಲ್ಲಿ ಗಲಾಟೆ ಮಾಡಿದ್ದರು. ಈ ಬಗ್ಗೆ ನ.1 ರಂದು ಸಂಗೀತಾ ಅವರು ಪತಿಯ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ಅರ್ಜಿ ನೀಡಿದ್ದರು. ಈ ಬಗ್ಗೆ ಅರ್ಜಿಯ ವಿಚಾರಣೆಯ ಸಲುವಾಗಿ ದಯಾನಂದ ರವರು ಠಾಣೆಗೆ ಬಾರದೇ ಇದ್ದು, ಅದೇ ದಿನ ಬೆಳಿಗ್ಗೆ 10 ಗಂಟೆಗೆ ದಯಾನಂದ ರವರು ಮನೆಯಿಂದ ಅವರ ಸ್ಕೂಟರ್ ತೆಗೆದುಕೊಂಡು ಹೋಗಿ ದೂಪದ ಕಟ್ಟೆಯ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹೋದವರು ಇದುವರೆಗೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ ಎಂಬುದಾಗಿ ಸಂಗೀತಾ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.