ಉಡುಪಿ: ವಕೀಲರ ಮನೆ ಕಳ್ಳತನ ಪ್ರಕರಣ- ಆರೋಪಿಗೆ ಶಿಕ್ಷೆ

ಉಡುಪಿ, ನ.04: ವಕೀಲರ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಗೆ ನಗರದ ಪ್ರಧಾನ ಹಿರಿಯ ಸಿ.ಜೆ ಮತ್ತು ಸಿ.ಜೆ.ಎಂ. ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

2022 ಫೆಬ್ರವರಿ 23 ರಂದು ಫಿಲೀಪ್ ಪಿ. ತೋಮಸ್ ಎಂಬಾತನು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಉಡುಪಿ ತಾಲೂಕು ಯು.ಬಿ.ಎಮ್.ಸಿ. ಜುಬಿಲಿ ಚರ್ಚ್ ಹತ್ತಿರದಲ್ಲಿರುವ ವಕೀಲ ನೊವೆಲ್ ಪ್ರಶಾಂತ್ ಕಾರ್ಕಡ ಅವರ ಮನೆಯ ಒಳಗೆ ಪ್ರವೇಶಿಸಿ ಮನೆಯ ಹಾಲ್‌ನ ಟೇಬಲ್ ಮೇಲೆ ಇಟ್ಟಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನ್ನು ಕಳವು ಮಾಡಿರುವ ಹಿನ್ನೆಲೆ, ಉಡುಪಿ ನಗರ ಠಾಣೆ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಹಿರಿಯ ಸಿ.ಜೆ ಮತ್ತು ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶೆ ಶಕುಂತಲ. ಎಸ್ ಅವರು ಆರೋಪಿ ಫಿಲೀಪ್ ಪಿ.ತೋಮಸ್ ಎಂಬಾತನಿಗೆ 8 ತಿಂಗಳು ಸಾಧಾ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ. ಕೆ. ವಾದ ಮಂಡಿಸಿರುತ್ತಾರೆ.

Leave a Reply

Your email address will not be published.

error: Content is protected !!