ಪ್ಯಾಕ್ ಮಾಡಿರುವ ಫ್ರೋಜನ್ ಪರೋಟಕ್ಕೆ 18 ಶೇ.ತೆರಿಗೆ

ನವದೆಹಲಿ ಅ.15: ಗುಜಾರಾತ್ ನಲ್ಲಿ ಪ್ಯಾಕ್ ಮಾಡಿರುವ ಫ್ರೋಜನ್ ಪರೋಟಕ್ಕೆ 18 ಶೇ. ದಷ್ಟು ತೆರಿಗೆ ವಿಧಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಗುಜರಾತ್ ಮೇಲ್ಮನವಿ ಪ್ರಾಧಿಕಾರ (ಜಿಎಎಎಆರ್) ವು ಪ್ಯಾಕ್ ಮಾಡಿರುವ ಫ್ರೋಜನ್ ‘ಪರೋಟ’ವು ‘ರೋಟಿ’ಗೆ ಸಮ ಅಲ್ಲ. ಇಂತಹ ಪರೋಟಕ್ಕೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಶೇಕಡ 5 ರಷ್ಟು ಮಾತ್ರ ತೆರಿಗೆ ವಿಧಿಸಲಾಗದು ಎಂದು ಹೇಳಿದೆ.

ಹಾಗೂ ರೋಟಿ ಅಥವಾ ಚಪಾತಿಗಳಲ್ಲಿ ಇರುವುದು ಗೋಧಿ ಹಿಟ್ಟು ಮಾತ್ರ ಆದರೆ, ಮಲಬಾರ್, ಮೇಥಿ, ಆಲೂ, ಲಚ್ಚಾ, ಮೂಲಿ ಅಥವಾ ಇನ್ಯಾವುದೇ ಹೆಸರಿನ ಇಂತಹ ಪರೋಟಗಳಲ್ಲಿ ಹೆಚ್ಚುವರಿ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಉಪ್ಪು, ಎಣ್ಣೆ, ಆಲೂಗಡ್ಡೆ, ಹೂಕೋಸು ಇವುಗಳಲ್ಲಿ ಇರುತ್ತದೆ. ಈ ಕಾರಣಗಳಿಗಾಗಿ ಪರೋಟಗಳಿಗೆ ಶೇ 5ರಷ್ಟು ಮಾತ್ರ ತೆರಿಗೆ ವಿಧಿಸಲಾಗದು ಎಂದು  ಹೇಳಿದೆ.

ಅಹಮದಾಬಾದ್ ಮೂಲದ ವಾದಿಲಾಲ್ ಇಂಡಸ್ಟ್ರೀಸ್ ಕಂಪನಿಯು, ಜಿಎಎಆರ್ ಆದೇಶ ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರದ (ಜಿಎಎಎಆರ್) ಮೆಟ್ಟಿಲೇರಿತ್ತು. 2021ರ ಜೂನ್‌ನಲ್ಲಿ ಜಿಎಎಆರ್, ಕಂಪನಿ ಮಾರಾಟ ಮಾಡುತ್ತಿರುವ ಪರೋಟವು ರೋಟಿ ಅಥವಾ ಚಪಾತಿಯಂತೆ ಅಲ್ಲ. ಹೀಗಾಗಿ, ಪರೋಟದ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಬೇಕು ಎಂದು ಹೇಳಿತ್ತು.

ಅಲ್ಲದೆ, ಎಎಆರ್ ನ ಕರ್ನಾಟಕ ಪೀಠವು ಕೂಡ ಫ್ರೆಶ್ ಫುಡ್ ಪ್ರಕರಣದಲ್ಲಿ ಫ್ರೋಜನ್ ಪರೋಟಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸಬೇಕು ಎಂದು ಆದೇಶ ನೀಡಿದೆ.

Leave a Reply

Your email address will not be published. Required fields are marked *

error: Content is protected !!