ಮಣಿಪಾಲ: ಮಾದಕ ವಸ್ತು ಸೇವನೆ ಪ್ರಕರಣ- 7 ಮಂದಿಯ ವಿರುದ್ಧ ಪ್ರಕರಣ

ಮಣಿಪಾಲ ಅ.1(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯ ವಿರುದ್ಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಆಯುಶ್ ಕುಮಾರ್ (21), ಹರ್ಷ ಕುಮಾರ್(21), ಮೊಹಮ್ಮದ್ ಹಸನ್ ರಾಜಾ(21), ಯಶ್ ಚಹಲ್ (21), ಆಕಾಶ್ ಅಗರ್ವಾಲ್ (19), ಅರಮಾನ್ ಗಂಧರ್ವ ಕೊಟ್ಟಾಯ್ ಕುಮಾರ್(21), ಅನನ್ಯಗರ್ಗ(21) ಎಂಬ 7 ಮಂದಿಯನ್ನು ಗಾಂಜಾ ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇವರ ವೈದೈಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ 7 ಮಂದಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ 7 ಪ್ರತ್ಯೇಕ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!