ಬೇರೆಯವರ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿದ್ದ ವ್ಯಕ್ತಿಗೆ ಜೈಲು ಶಿಕ್ಷೆ

ಮಂಗಳೂರು, ಅ.1: ಬೇರೆಯವರ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಪ್ರಯತ್ನಿಸಿದ್ದ ಬಂಟ್ವಾಳ ಸರಪಾಡಿ ನಿವಾಸಿ ಬದ್ರುದ್ದೀನ್ ಎಂಬಾತನಿಗೆ ಮಂಗಳೂರು ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2010ರ ಫೆ.2ರಂದು ಬಂಟ್ವಾಳ ಸರಪಾಡಿ ಗ್ರಾಮದ ನಿವಾಸಿ ಬದ್ರುದ್ದೀನ್ ಹಸೈನಾರ್ ಗೆ ಸೇರಿದ ಪಾಸ್ ಪೋರ್ಟ್‍ನಲ್ಲಿ ದುಬೈಗೆ ಹೋಗಲು ಯತ್ನಿಸಿದ್ದ. ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ವೇಳೆ ಆರೋಪಿ ಸಿಕ್ಕಿ ಬಿದ್ದಿದ್ದು, ಈ ಬಗ್ಗೆ ಇಮಿಗ್ರೇಷನ್ ಅಧಿಕಾರಿ ಕೆ.ಎಂ. ಚಂದ್ರಶೇಖರ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಈ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಬಜಪೆ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣವನ್ನು  ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಅವರು ಸೆ. 28 ರಂದು ಆರೋಪಿ ಬದ್ರುದ್ದೀನ್ ಗೆ 1 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಹಾಗೂ  ಈ ಪ್ರಕರಣದಲ್ಲಿ ಬದ್ರುದ್ದೀನ್ ಗೆ ಪಾಸ್ ಪೋರ್ಟ್ ನೀಡಿದ್ದ ಬಂಟ್ವಾಳ ಮಂಚಿ ಗ್ರಾಮದ ಅಬ್ಟಾಸ್ ನನ್ನು ನ್ಯಾಯಾಲಯ ಖುಲಾಸೆ ಗೊಳಿಸಿದೆ ಎಂದು ತಿಳಿದು ಬಂದಿದೆ. 

Leave a Reply

Your email address will not be published. Required fields are marked *

error: Content is protected !!