ಆರ್ಥಿಕ ಬಿಕ್ಕಟ್ಟಿನಲ್ಲಿ ಸ್ಪೈಸ್ ಜೆಟ್- 80 ಪೈಲಟ್’ಗಳಿಗೆ ವೇತನ ರಹಿತ ರಜೆ

ನವದೆಹಲಿ ಸೆ.21: ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯು ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿ ಕೊಂಡಿದ್ದು, ತನ್ನ 80 ಪೈಲಟ್ ಗಳಿಗೆ 3 ತಿಂಗಳ ವೇತನರಹಿತ ರಜೆಯನ್ನು ನೀಡಿದೆ.

ಒತ್ತಾಯಪೂರ್ವಕವಾಗಿ ರಜೆ ನೀಡಿರುವ ಸಂಸ್ಥೆ ಬಗ್ಗೆ ಪೈಲಟ್ ಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ವೆಚ್ಚ ಕಡಿತದ ಉದ್ದೇಶದಿಂದ ತಾತ್ಕಾಲಿಕವಾಗಿ ಇಂಥ ನಿರ್ಧಾರ ಕೈಗೊಂಡಿರುವುದಾಗಿ ಸಂಸ್ಥೆ ತಿಳಿಸಿದೆ.

ಇದೀಗ ಸಂಸ್ಥೆ ರಜೆ ನೀಡಿರುವ ಬಗ್ಗೆ ಪೈಲೆಟ್ ಗಳು ಆತಂಕ ವ್ಯಕ್ತಪಡಿಸಿದ್ದು, 3 ತಿಂಗಳ ಬಳಿಕ ನಮ್ಮನ್ನು ವಾಪಸ್ ಕರೆಯುತ್ತಾರೋ ಇಲ್ಲವೋ ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ಅನಿಶ್ಚಿತತೆ ಭಯ ಮೂಡಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!