ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದು 4 ಸಾವು, ಮೂವರ ಗಂಭೀರ

ನವದೆಹಲಿ ಸೆ.21: ಇಲ್ಲಿನ ಸೀಮಾಪುರಿ ಪ್ರದೇಶದಲ್ಲಿ ರಸ್ತೆ ಬದಿ ಮಲಗಿದ್ದವರ ಮೇಲೆ ಟ್ರಕ್ ಹರಿದು ನಾಲ್ವರು ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ ನಸುಕಿನ ವೇಳೆ ನಡೆದಿದೆ.

ಕರೀಂ (52), ಚೋಟ್ಟೆ ಖಾನ್ (25), ಶಾ ಆಲಂ (38) ಹಾಗೂ ರಾಹುಲ್ (45) ಮೃತಪಟ್ಟವರು.

ಅಪಘಾತ ನಡೆಸಿದ ಟ್ರಕ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಆಸ್ಪತ್ತ್ರೆಗೆ ದಾಖಲಿಸಲಾಗಿದೆ.

ಸೀಮಾಪುರಿ ಪ್ರದೇಶದಲ್ಲಿ ರಸ್ತೆಯ ವಿಭಜಕದ ಮೇಲೆ ಮಲಗಿದ್ದ ಏಳು ಮಂದಿಯ ಮೇಲೆ ಟ್ರಕ್ ಹರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!