ಕೋಟ: ಮೀನುಗಾರ ನಾಪತ್ತೆ

ಕೋಟ ಸೆ.20 (ಉಡುಪಿ ಟೈಮ್ಸ್ ವರದಿ): ಕೋಡಿಕನ್ಯಾನದ ಮನೆಯಿಂದ ಮೀನುಗಾರಿಕೆಗೆಂದು ಹೋದ ಮೀನುಗಾರರೊಬ್ಬರು ಸೆ.17 ರಿಂದ ನಾಪತ್ತೆಯಾಗಿದ್ದಾರೆ.

ಕೋಡಿಕನ್ಯಾನದ ಉದಯ ಕಾಂಚನ್ (43) ನಾಪತ್ತೆಯಾದವರು. ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು ಸೆ.17 ರಂದು ಕೋಡಿಕನ್ಯಾನದ ತಮ್ಮ ಮನೆಯಿಂದ ಮೀನುಗಾರಿಕೆ ಕೆಲಸಕ್ಕೆಂದು ಹೋಗಿದ್ದರು. ಆದರೆ ಆ ಬಳಿಕ ಈ ವರೆಗೂ ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಿದರೂ ಎಲ್ಲೂ ಅವರು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಉದಯ ಕಾಂಚನ್ ಅವರ ಅಣ್ಣ ವಿಜಯ ಕಾಂಚನ್ ಅವರು ನೀಡಿದ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!