ಒಂದು ಲಾಟರಿಯಿಂದ ಬಡ ಆಟೋ ಚಾಲಕನ ಭಾಗ್ಯದ ಬಾಗಿಲು ತೆರೆಯಿತು….
ಕೇರಳ ಸೆ.19: ತಿರುವನಂತಪುರ ದಲ್ಲಿ ಆಟೋ ಚಾಲಕರೊಬ್ಬರು ಬರೋಬ್ಬರಿ 25 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದಿದ್ದಾರೆ.
ಅನೂಪ್ (32) ಟಿವಿಎಂ ಆಟೋ ರಿಕ್ಷಾ ಚಾಲಕ ಬಹುಮಾನ ವಿಜೇತ ಎಂದು ಗುರುತಿಸಲಾಗಿದೆ. ವಿಜೇತ ಟಿಕೆಟ್ ನ್ನು ತಿರುವನಂತಪುರದ ಪಜವಂಗಡಿ ಭಗವತಿ ಏಜೆನ್ಸಿ ಮಾರಾಟ ಮಾಡಿದ್ದು, ಎರಡನೇ ಬಹುಮಾನ 5 ಕೋಟಿ ಕೊಟ್ಟಾಯಂ ಜಿಲ್ಲೆಯ ವ್ಯಕ್ತಿಗೆ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಅನೂಪ್ ಆಟೋ ಚಾಲಕನಾಗಿದ್ದು ಬಡತನದಿಂದಿದ್ದ, ಡ್ರಾಗೆ ಒಂದು ದಿನ ಮೊದಲು ಟಿಕೆಟ್ ಖರೀದಿಸಿದ್ದ ಎನ್ನಲಾಗಿದೆ. ಇದೀಗ ಲಾಟರಿ ಹೊಡೆದು ಅನೂಪ್ ಕೋಟ್ಯಾದೀಶರಾಗಿದ್ದು, ಸಂತಸವನ್ನು ಹಂಚಿಕೊಂಡಿದ್ದಾರೆ.
ಕೇರಳ ರಾಜ್ಯ ಲಾಟರಿ ಇಲಾಖೆಯು ನಿನ್ನೆ ಮಧ್ಯಾಹ್ನ ಓಣಂ ಬಂಪರ್ 2022 (BR-87) ಅಥವಾ ತಿರುವೋಣಂ ಬಂಪರ್ ಫಲಿತಾಂಶಗಳನ್ನು ಮಧ್ಯಾಹ್ನ 2 ಗಂಟೆಗೆ ಘೋಷಿಸಿತ್ತು.