ಉಡುಪಿ: ಮಾದಕ ವಸ್ತು ಸೇವನೆ ಪ್ರಕರಣ- 6 ಮಂದಿ ವಶಕ್ಕೆ
ಉಡುಪಿ ಸೆ.16 (ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ 6 ಮಂದಿ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಹರ್ಷ(23),ಅವಿನಾಶ್(24), ಮದನ್ ಕುಮಾರ್ (36) ,ಭೀಮ್ ಸಿಂಗ್, ಖುಷಿ ರಾಮ್, ಮೊಹಮ್ಮದ್ ಸಮೀರ್ ಪೊಲೀಸರು ವಶಕ್ಕೆ ಪಡೆದವರು.
ಯುವಕರು ಗಾಂಜಾ ಸೇವಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಬೀಚ್ ಬಳಿ ಪಾರ್ಕ್ ನಲ್ಲಿ ಹರ್ಷ ಮತ್ತು ಅವಿನಾಶ್ ನನ್ನು, ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಗ್ರಾಮದ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದ ಬಳಿ ಮದನ್‍ಕುಮಾರ್, ಮೂಡ್ಲಕಟ್ಟೆ ಕಾಲೇಜು ಬಳಿ ಭೀಮ್ ಸಿಂಗ್ ಮತ್ತು ಖುಷಿ ರಾಮ್ ಎಂಬಾತನನ್ನು ಹಾಗೂ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪಡುತೋನ್ಸೆ ಗ್ರಾಮದ ಹೂಡೆ ಜಂಕ್ಷನ್ ಬಳಿ ಮೊಹಮ್ಮದ್ ಸಮೀರ್ ನನ್ನು ಮಾದಕ ವಸ್ತು ಸೇವಿಸಿರುವ ಅನುಮಾದ ಮೇರೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಈ 6 ಮಂದಿಯ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಗಂಗೊಳ್ಳಿ, ಮಲ್ಪೆ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಸೇರಿ ಜಿಲ್ಲೆಯಲ್ಲಿ 6 ಮಂದಿ ವಿರುದ್ಧ ಒಟ್ಟು 5 ಮಾದಕ ವಸ್ತು ಸೇವನೆ ಪ್ರಕರಣ ದಾಖಲಾಗಿದೆ.