ಮೊಬೈಲ್ ಕಳ್ಳನನ್ನು ಹತ್ತು ಕಿ.ಮೀ ರೈಲಿನ ಕಿಟಕಿಯಲ್ಲಿ ಎಳೆದೊಯ್ಯದ ಪ್ರಯಾಣಿಕ!

ಪಾಟ್ನಾ ಸೆ.16: ಕಿಟಕಿ ಮೂಲಕ ರೈಲಿನೊಳಗೆ ಕಳ್ಳತನ ಮಾಡಲು ಯತ್ನಿಸಿ ಸಿಕ್ಕಿಬಿದ್ದು ಕಳ್ಳನೋರ್ವ ಸುಮಾರು ಹತ್ತು ಕಿಲೋ ಮೀಟರ್ ನಷ್ಟು ದೂರ ರೈಲು ಕಿಟಕಿ ಹಿಡಿದು ಜೋತಾಡುತ್ತ ಸಾಗಿದ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಬೇಗುಸರಾಯ್ ನಿಂದ ಖಗಾರಿಯಾಗೆ ರೈಲು ಸಂಚರಿಸುತ್ತಿದ್ದ ವೇಳೆಯಲ್ಲಿ ಕಳ್ಳ ಕಿಟಕಿಯೊಳಗೆ ಕೈಹಾಕಿ ಪ್ರಯಾಣಿಕರ ಮೊಬೈಲ್ ಕಳ್ಳತನ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಪ್ರಯಾಣಿಕ ಆತನ ಎರಡು ಕೈಗಳನ್ನು ಹಿಡಿದುಕೊಂಡು ಬಿಟ್ಟಿದ್ದ. ಈ ವೇಳೆ ರೈಲು ಚಲಿಸುತ್ತಿದ್ದೂದರಿಂದ ಕಳ್ಳ ಕಿಟಕಿಯಲ್ಲಿ ಜೋತು ಬಿದ್ದು ಸಾಗುವಂತಾಗಿತ್ತು.

ಇದೀಗ ಕಳ್ಳತನ ನಡೆಸಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಕಿಟಕಿಯಲ್ಲಿ ಜೋತು ಬಿದ್ದು ಕಳ್ಳ ಗಟ್ಟಿಯಾಗಿ ಕೂಗಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!