ಉಡುಪಿ: ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳ ಅರಿವು ಇರಬೇಕು- ಫಾ.ಜೇಸನ್

ಉಡುಪಿ: ಹಿಂದೆ ಕೂಡು ಕುಟುಂಬಗಳು ಇರುವಾಗ ಮಕ್ಕಳು ಹಿರಿಯರನ್ನು ನೋಡಿ, ಹೊಲಗದ್ದೆಗಳಲ್ಲಿ ಕಾಯಕ ನೋಡಿ ಜೀವನ ಕೌಶಲ್ಯ ತಾವಾಗಿಯೇ ಬೆಳೆಸಿಕೊಳ್ಳುತ್ತಿದ್ದರು. ಇಂದು ಮಿತ ಕುಟುಂಬಗಳ ತಂದೆ ತಾಯಿ ಇಬ್ಬರೂ ಹೊರ ದುಡಿಯುವವರು, ವಿದ್ಯಾರ್ಥಿಗಳು ಹಿರಿಯರಿಂದ ದೂರವಿರವುದರಿಂದ ಸಾಕಷ್ಟು ಕೌಶಲ್ಯಗಳಿಂದ ವಂಚಿತರಾಗುತ್ತಾರೆ. ಹಾಗಾಗಿ ಶಾಲೆಗಳು ಜೀವನ ಕೌಶಲ್ಯಗಳನ್ನು ಪೋಷಿಸಿ ಬೆಳೆಸುವ ಕೇಂದ್ರಗಳಾಗಿವೆ.ಇದರ ಮಹತ್ವ ವಿದ್ಯಾರ್ಥಿಗಳು ತಿಳಿಯಬೇಕೆಂದು ಫಾ. ಜೇಸನ್ ಪಿಂಟೊ ಹೇಳಿದರು.

ಅವರು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ನೆನಪುಶಕ್ತಿ, ಆತ್ಮಸ್ಥೆರ್ಯ, ಏಕಾಗ್ರತೆ, ಇಷ್ಟಪಟ್ಟು ಕಲಿಯುವಿಕೆ, ಗುರಿ ನಿರ್ಧಾರ ಮುಂತಾದ ಕೌಶಲ್ಯಗಳ ಬಗ್ಗೆ ಶಿರ್ವ ಡಾನ್ ಬಾಸ್ಕೋ ಯೂತ್ ಸೆಂಟರ್ ಇಲ್ಲಿನ ಯುವ ವಿದ್ಯಾರ್ಥಿಗಳ ನುರಿತ ತರಬೇತುದಾರರಾದ ಫಾ.ಜೇಮ್ಸ್ ಮತ್ತು ಫಾ.ಜೇಸನ್ ತರಬೇತಿ ನಡೆಸಿಕೊಟ್ಟರು.

ಶಾಲಾ ಮುಖ್ಯಶಿಕ್ಷಕಿ ಸಿ.ವಂದಿತಾ ಶಾಲೆಯಲ್ಲಿ ಆಯೋಜಿಸುವ ಪ್ರತಿ ಕಾರ್ಯಕ್ರಮ, ತರಬೇತಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಲವಲವಿಕೆಯಿಂದ ಪಾಲ್ಗೊಂಡು ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಶಿಕ್ಷಕ ಆಲ್ವಿನ್‌ದಾಂತಿ ಸ್ವಾಗತಿಸಿ ನಿರೂಪಿಸಿದರು. ವಿದ್ಯಾರ್ಥಿ ಭರತ್ ಶಾನ್‌ಬಾಗ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!