ಕಾರ್ಕಳ: ಮನೆಗೆ ನುಗ್ಗಿ 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಕಾರ್ಕಳ ಸೆ.6 (ಉಡುಪಿ ಟೈಮ್ಸ್ ವರದಿ): ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಂದಾಜು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕಾರ್ಕಳದ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಪೊಸ್ರಾಲ್ ಎಂಬಲ್ಲಿ ನಡೆದಿದೆ.

ವಿವಿಟಾ ಡಿಸೋಜಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಆ.30 ರಂದು ಅವರು ತಮ್ಮ ಗಂಡನ ಮನೆಯ ಬೆಡ್ ರೂಮ್ ನ ಕಪಾಟಿನಲ್ಲಿನ ಲಾಕರ್ ನಲ್ಲಿ ಅಂದಾಜು 6 ಲಕ್ಷ ರೂ ಮೌಲ್ಯದ ಸುಮಾರು 154 ಗ್ರಾಮ್ ತೂಕದ ಚಿನ್ನದ ಒಡವೆಗಳನ್ನು ಇಟ್ಟು ಲಾಕ್ ಮಾಡಿ ಹೋಗಿದ್ದರು. ಆದರೆ ಸೆ.5 ರಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಇಟ್ಟಿದ್ದ ಚಿನ್ನ ಕಳವಾಗಿರುವುದು ಗಮನಕ್ಕೆ ಬಂದಿದೆ.  

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Leave a Reply

Your email address will not be published. Required fields are marked *

error: Content is protected !!