ಕುಂದಾಪುರ: ಚಿನ್ನಾಭರಣ ಕಳವು

ಕುಂದಾಪುರ ಸೆ.6(ಉಡುಪಿ ಟೈಮ್ಸ್ ವರದಿ): ತಾಲೂಕಿನ ಹೆಸ್ಕತ್ತೂರು ಗ್ರಾಮದ ಮನೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಳ್ಳತನವಾಗಿದ್ದು, ಮನೆಕೆಲಸದಾಕೆ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ನವೀನ್ ಶೆಟ್ಟಿ ಎಂಬವರು ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.

ಹೆಸ್ಕತ್ತೂರು ಗ್ರಾಮದ ನವೀನ್ ಶೆಟ್ಟಿ ಇವರ ದೊಡ್ಡಮ್ಮ ಜಲಜಮ್ಮ ಶೆಡ್ತಿ ರವರ ಮೊಮ್ಮಕ್ಕಳು ವಿದೇಶದಲ್ಲಿ ನೆಲೆಸಿರುವುದರಿಂದ, ಒಬ್ಬಂಟಿಯಾಗಿ ವಾಸವಾಗಿರುವ ಜಲಜಮ್ಮ ಶೆಡ್ತಿ ಅವರ ಮನೆಗೆ ನವೀನ್ ಶೆಟ್ಟಿ ಅವರು ಆಗಾಗೆ ಮನೆಗೆ ಹೋಗಿ ಬರುತ್ತಿದ್ದರು. ಜಲಜಮ್ಮ ಶೆಡ್ತಿರವರ ಅವರಿಗೆ ವಯಸ್ಸಾದ ಕಾರಣ ಮನೆ ಕೆಲಸಕ್ಕೆಂದು ಮನೆಕೆಲಸದವರನ್ನು ನೇಮಿಸಿದ್ದರು.

ಆ.30 ರಂದು ಮನೆಯಲ್ಲಿ ಗೌರಿ ಹಬ್ಬದ ಪೂಜೆ ಇದ್ದುದರಿಂದ ಪ್ರತಿ ವರ್ಷವು ನವೀನ್ ಶೆಟ್ಟಿ ರವರ ಮನೆಯ ಮತ್ತು ಜಲಜಮ್ಮ ಶೆಡ್ತಿ ರವರ ಚಿನ್ನವನ್ನು ದೇವರ ಪೂಜೆಗೆ ಇಟ್ಟು ಪೂಜೆಯನ್ನು ಮಾಡುತ್ತಿದ್ದರು. ಅದರಂತೆ ಬೆಳಿಗ್ಗೆ ಜಲಜಮ್ಮ ಶೆಡ್ತಿರವರ ಮನೆಯಲ್ಲಿ ಕಪಾಟಿನಲ್ಲಿ ಇರಿಸಿದ ಚಿನ್ನದ ಬಳೆಯನ್ನು ತೆಗೆಯಲು ಹೋದಾಗ ಕಪಾಟಿನಲ್ಲಿ ಬಳೆ ಹಾಗೂ ಎಟಿಎಂ ಕಾರ್ಡ್ ಇಲ್ಲದಿರುವುದು ಗಮನಕ್ಕೆ ಬಂದಿದೆ.

ಅದನ್ನು ಹುಡುಕಾಡಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ. ನಂತರ ಮನೆ ಕೆಲಸದ ಸುಮಿತ್ರಾಳಲ್ಲಿ ವಿಚಾರಿಸಿದಾಗ ತಾನು ತೆಗೆದಿರುವುದಿಲ್ಲವೆಂದು ಅವರು ಹೇಳಿದ್ದು ಈ ವೇಳೆ ಮನೆಯಲ್ಲಿ ಕೇವಲ 1 ವಾರದ ಮಟ್ಟಿಗೆ ಕೆಲಸಕ್ಕೆ ಬಂದಿದ್ದ ಸುಶ್ಮಿತಾಳನ್ನು ವಿಚಾರಿಸಲು ಆಕೆಗೆ ಎಷ್ಟೇ ಬಾರಿ ಕರೆ ಮಾಡಿದರೂ ಕೂಡಾ ಅವಳು ಫೋನ್ ರಿಸೀವ್ ಮಾಡಿರುವುದಿಲ್ಲ. ಅಲ್ಲದೇ ಈ ಬಗ್ಗೆ ಮನೆ ಕೆಲಸಕ್ಕೆ ಕಳುಹಿಸಿದ ಮಂಗಳೂರಿನ ದಾಸ್ ಏಜೆನ್ಸಿ ಯವರಲ್ಲಿ ವಿಚಾರಿಸಿದಲ್ಲಿ ಅವರೂ ಸರಿಯಾಗಿ ಪ್ರತಿಕ್ರಿಯಿಸಿರುವುದಿಲ್ಲ. ಆದುದರಿಂದ ಜಲಜಮ್ಮ ಶೆಡ್ತಿರವರ ಮನೆಯ ಕಪಾಟಿನಿಲ್ಲಿಟ್ಟಿದ್ದ ಸುಮಾರು 2 ಪವನ್ ತೂಕದ ಸುಮಾರು 1,10,000 ರೂ. ಮೌಲ್ಯದ ಒಂದು ಚಿನ್ನದ ಬಳೆ ಮತ್ತು ಎಟಿಎಂ ಕಾರ್ಡ್ ನ್ನು ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಸುಶ್ಮಿತಾಳು ಕಳವು ಮಾಡಿಕೊಂಡು ಹೋಗಿರುವ ಅನುಮಾನವಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!