ಮಲ್ಪೆ: ಮೀನು ಖಾಲಿ ಮಾಡುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ಮೀನುಗಾರ ಮೃತ್ಯು

ಉಡುಪಿ, ಸೆ.5: ಮಲ್ಪೆ ಬಂದರಿನಲ್ಲಿ ಬೋಟ್ ನಿಂದ ಮೀನು ಖಾಲಿ ಮಾಡುವ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಹನುಮ ನಿಧಿ ಕಣ್ಣಿ ಪಾರ್ಟಿಯಲ್ಲಿ ಕೆಲಸ ಮಾಡುತಿದ್ದ ಪುರಂದರ(42) ಮೃತಪಟ್ಟವರು.

ಪುರಂದರ ಅವರು ಭಾನುವಾರ ರಾತ್ರಿ 10:45 ರ ಸುಮಾರಿಗೆ ಬೋಟ್ ನಿಂದ ಮೀನು ಖಾಲಿ ಮಾಡುವ ಸಂಧರ್ಭ ಕಾಲು ಜಾರಿ ಸಮುದ್ರಕ್ಕೆಬಿದ್ದಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದ ಮುಳುಗು ತಜ್ಷರಾದ ಈಶ್ವರ್ ಮಲ್ಪೆ ಅವರು ಪುರಂದರ ಅವರ ದೇಹವನ್ನು ಮೇಲಕ್ಕೆ ಎತ್ತಿದ್ದು, ಅಸ್ವಸ್ಥಗೊಂಡಿದ್ದ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು, ಪುರಂದರ ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!