ಸಾಲ ವಸೂಲಿಗೆ ಬಲಪ್ರಯೋಗ, ಕಿರುಕುಳ ನೀಡುವಂತಿಲ್ಲ-ಆರ್’ಬಿಐ

ಮುಂಬಯಿ ಆ.13:ಬ್ಯಾಂಕೇತರ ವಿತ್ತೀಯ ಸಂಸ್ಥೆಗಳು, ಆಸ್ತಿ ಪುನರ್‌ರಚನೆ ಸೇವೆ ನೀಡುವ ಕಂಪೆನಿಗಗಳಿಗೆ (ಎಆರ್‌ಸಿ) ಹೊಸ ನಿಯಮ ಅನ್ವಯವಾಗಲಿದೆ. ಅದರಂತೆ ಸಾಲ ವಸೂಲು ಮಾಡುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಪ್ರತಿನಿಧಿಗಳು ಬಲಪ್ರಯೋಗ, ಕಿರುಕುಳ ನೀಡುವಂಥ ಕ್ರಮಗಳನ್ನು ಅನುಸರಿಸುವಂತೆಯೇ ಇಲ್ಲ ಎಂದು ಆರ್.ಬಿ.ಐ ಹೇಳಿದೆ.

ಈ ಹಿಂದೆಯೇ ಹೊರಡಿಸಲಾಗಿರುವ ನಿಯಮಗಳನ್ನು ಸಂಸ್ಥೆಗಳು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ.

ಹೀಗಾಗಿ, ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಆರ್.ಬಿ.ಐ ಸ್ಪಷ್ಟಪಡಿಸಿದ್ದು, ಸಾಲ ವಸೂಲು ಮಾಡುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಪ್ರತಿನಿಧಿಗಳು ಬಲಪ್ರಯೋಗ, ಕಿರುಕುಳ ನೀಡುವಂಥ ಕ್ರಮಗಳನ್ನು ಅನುಸರಿಸುವಂತೆಯೇ ಇಲ್ಲ. ಅನಪೇಕ್ಷಿತ ಸಂದೇಶಗಳನ್ನು, ಅನಾಮಧೇಯರ ಹೆಸರಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮೊದಲು ಮತ್ತು ರಾತ್ರಿ 7 ಗಂಟೆಯ ಬಳಿಕ ಫೋನ್‌ ಮಾಡುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!