ನನ್ನ ಫೋನ್ ಟ್ರ್ಯಾಪ್ ಆಗಿದೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಗಂಭೀರ ಆರೋಪ
ಬೆಂಗಳೂರು: ನನ್ನ ಫೋನ್ ಟ್ಯ್ರಾಪ್ ಆಗಿದೆ ಅನಿಸುತ್ತಿದೆ. ಬೆಳಗ್ಗೆಯಿಂದ ಸರಿಯಾಗಿ ಕರೆಗಳು ಬರುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಸುದರ್ಶನ್ ಅವರು ನನಗೆ ಬೆಳಗ್ಗೆಯಿಂದ 20ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಾರೆ ಅಂತೆ. ಆದರೆ ನನಗೆ ಕರೆಗಳೇ ಬರುತ್ತಿಲ್ಲ. ರಾಜ್ಯ ಸರ್ಕಾರ ಏನೇನು ಬೇಕೊ ಅದನ್ನು ಅವರು ಮಾಡಿಕೊಳ್ಳಲಿ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ನನ್ನ ಫೋನ್ ಟ್ಯಾಪಿಂಗ್ ಆಗಿರುವುದು ಅಕ್ಷರಶಃ ನಿಜ. ಈ ಹಿಂದೆಯೂ ಆಗುತ್ತಿತ್ತು. ಈಗ ಮತ್ತೆ ಆಗುತ್ತಿದೆ ಎಂದು ಡಿಕೆ ಶಿವಕುಮಾರ್ ಅವರು ಆರೋಪಿಸಿದ್ದಾರೆ.
ಡಿಕೆ ಶಿವಕುಮಾರ್ ಆರೋಪವನ್ನು ತಿರಸ್ಕರಿಸಿರುವ ಕಂದಾಯ ಸಚಿವ ಆರ್ ಅಶೋಕ್ ಅವರು ಫೋನ್ ಟ್ಯಾಪಿಂಗ್ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡವರೇ ಆರೋಪ ಮಾಡಿದ್ದಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ಹೇಳಿದ್ದಾರೆ.