ಖಾಸಗಿ ಆಸ್ಪತ್ರೆಯ ಹಣದ ದಾಹ! ಟ್ವಿಟ್ಟರ್ ನಲ್ಲಿ ಆಕ್ರೋಶ: ನಂತರ ನವಜಾತ ಶಿಶುವಿನ ಡಿಸ್ಚಾರ್ಜ್

ಬೆಂಗಳೂರು: ಚಿಕಿತ್ಸೆಯ ಮೊತ್ತವನ್ನು ಪಾವತಿಸಲು ಅಸಮರ್ಥರಾದ ಕಾರಣ ಖಾಸಗಿ ಆಸ್ಪತ್ರೆಯೊಂದು ತನ್ನ ನವಜಾತ ಶಿಶುವಿನ ಡಿಸ್ಚಾರ್ಜ್ ಗೆ ವಿಳಂಬ ಮಾಡಿದೆ ಸಮಸ್ಯೆ ಬಗ್ಗೆ ಟ್ವಿಟ್ತರ್ ನಲ್ಲಿ ಪ್ರಕಟಿಸಿದ ನಂತರ ಆಸ್ಪತ್ರೆ ಮಗುವನ್ನು ಬಿಡುಗಡೆಗೊಳಿಸಿದೆ ಎಂದು ಆರ್‌ಟಿ ನಗರದ ನಿವಾಸಿಯೊಬ್ಬರು ಆರೋಪಿಸಿದ್ದಾರೆ. 

ಶಾಹಿದ್ ಅಲಿ ಬೇಗ್ ಎನ್ನುವವರ ಪತ್ನಿ ಹೆಬ್ಬಾಳದ ಮದರ್ ಹುಡ್ ಆಸ್ಪತ್ರೆಯಲ್ಲಿ ಅವಧಿಪೂರ್ವವಾಗಿ ಮಗುವುಗೆ ಜನ್ಮ ನೀಡಿದ್ದರು. ಏಪ್ರಿಲ್ 7ರಂದು ಅವರ ಹೆರಿಗೆಯಾಗಿ ಮಗುವನ್ನು ಹೊರತೆಗೆಯಲಾಗಿತ್ತು, ನಾಲ್ಕು ತಿಂಗಳ ಚಿಕಿತ್ಸೆಯ ನಂತರ, ಆಸ್ಪತ್ರೆಯು ಆಗಸ್ಟ್ 14 ರಂದು ಆಕೆಯನ್ನು ಡಿಸ್ಚಾರ್ಜ್ ಮಾಡಲು ಅಡ್ಡಿಯಿಲ್ಲವೆಂದು ಆಸ್ಪತ್ರೆ ತಿಳಿಸಿದೆ, ಆದರೆ ಬೇಗ್ ಅವರಲ್ಲಿ ಆಸ್ಪತ್ರೆಗೆ ಪಾವತಿಸಬೇಕಾಗಿದ್ದ ಸಂಪೂರ್ಣ ಹಣ ಪಾವತಿಸಲು ಸಾಧ್ಯವಾಗದ ಕಾರಣ ಆಸ್ಪತ್ರೆ ಮಗುವನ್ನು ಡಿಸ್ಚಾರ್ಜ್ ಮಾಡಲು ನಿರಾಕರಿಸಿದೆ.

ಮಗು ಅಕಾಲಿಕವಾಗಿ ಜನಿಸಿದ್ದರಿಂದ 5-12 ದಿನಗಳ ಕಾಲ ಐಸಿಯುನಲ್ಲಿ ಇರಬೇಕಾಗಿತ್ತೆಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ ಎಂದು ಬೇಗ್ ಹೇಳಿದರು. “ಖರ್ಚುಗಳನ್ನು ಭರಿಸಲು ನನಗೆ ಸಾಧ್ಯವಾಗುವಷ್ಟು ಕಾಲ ನಾನು ಪತ್ನಿ-ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟಿರಲು ಆಗುವುದಿಲ್ಲ ಎಂದು ನಾನು ಆಸ್ಪತ್ರೆ ಸಿಬ್ಬಂದಿಗೆ ಹೇಳಿದ್ದೆ” ಶಾಹಿದ್ ತಿಳಿಸಿದರು.

ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ  ಶಾಹಿದ್ ಅವರು ಲಾಕ್ ಡೌನ್ ಸಮಯದಲ್ಲಿ ಆದಾಯವಿಲ್ಲದೆ ನಷ್ಟ ಹೊಂದಿದ್ದಾರೆ. “ಮೊದಲಿಗೆ ಆಸ್ಪತ್ರೆಯವರು  12 ದಿನಗಳ ಅವಧಿ ಹೇಳಿದ್ದರು, ಆದರೆ ಅದರ ನಂತರ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಿದ್ದಾರೆ. ಮಗುವಿಗೆ ಗಂಭೀರ ಸಮಸ್ಯೆ ಇದೆ ಹಾಗಾಗಿ ಆಸ್ಪತ್ರೆಯ ಇಂದಿರಾನಗರ ಶಾಖೆಯಲ್ಲಿ ಚಿಕಿತ್ಸೆ ನಿಡಬೇಕಿದೆ ಎಂದು ನನಗೆ ತಿಳಿಸಿದರು. ಇದು ನನಗೆ ಅಚ್ಚರಿಯನ್ನು ಉಂಟು ಮಾಡಿತ್ತು. ಏಕೆಂದರೆ ಮಗುವಿನ ಆರೋಗ್ಯ ಸೂಕ್ಷ್ಮವಾಗಿದೆ ಎಂದು ಆಸ್ಪತ್ರೆ ಈ ಮುನ್ನ ನನಗೆ ಹೇಳಿರಲಿಲ್ಲ. ಇದ್ದಕ್ಕಿದ್ದಂತೆ, ಅವರು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದಾಗ ನಾನು ನಂಬದಾದೆ.” ಶಾಹಿದ್  ವಿವರಿಸಿದ್ದಾರೆ.

ನಂತರ ಮಗುವನ್ನು 20 ದಿನಗಳ ಕಾಲ ವೆಂಟಿಲೇಟರ್ ಬೆಂಬಲದೊಂದಿಗೆ ಇರಿಸಲಾಯಿತು ಮತ್ತು ಮೂರು ಶಸ್ತ್ರಚಿಕಿತ್ಸೆಗಳಿಗೆ ಒಳಪಡಿಸಲಾಯಿತು. “ಕಳೆದ ಶುಕ್ರವಾರ, ನಾನು ನನ್ನ ಮಗುವನ್ನು ಕರೆದುಕೊಂಡು ಹೋಗಬಹುದೆಂದು ಅವರು ಹೇಳಿದ್ದರು, ಆದರೆ ಪೂರ್ಣ ಮೊತ್ತವನ್ನು ಪಾವತಿಸಲು ಸಾಧ್ಯವಾಗದಿದ್ದಾಗಮಗುವನ್ನು ಡಿಸ್ಚಾರ್ಜ್ ಮಾಡಲು ನಿರಾಕರಿಸಿದ್ದಾರೆ.”ಶಾಹಿದ್ ಅವರು ಸಂಬಂಧಿಕರಿಂದ ಹಣವನ್ನುಸಾಲ ಪಡೆದರು.  ಚಾರಿಟಬಲ್ ಟ್ರಸ್ಟ್‌ನಿಂದ ಸಹಾಯವನ್ನೂ ಪಡೆದರು, ಆದರೆ ಕೇವಲ 12 ಲಕ್ಷ ರೂ ಮಾತ್ರ ಸಂಗ್ರಹವಾಗಿತ್ತು. ಆಸ್ಪತ್ರೆಗೆ ಪಾವತಿಸಬೇಕಾಗಿದ್ದ ಹೆಚ್ಚುವರಿ  8 ಲಕ್ಷ ರೂಪಾಯಿಗಳನ್ನು ಪಾವತಿಸಲು  ಸಾಧ್ಯವಾಗಿಲ್ಲ. 

ಗುರುವಾರ, ಅವರು ತಮ್ಮ ಈ ಸಮಸ್ಯೆ ಬಗೆಗೆ ಹೇಳಿಕೊಳ್ಳಲು ಟ್ವಿಟ್ಟರ್ ಮೊರೆ ಹೋಗಿದ್ದಾರೆ. ನಂತರ ಜನರು ಆಸ್ಪತ್ರೆಯ ನಡೆಯನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾದ ನಂತರ ಆಸ್ಪತ್ರೆಯು ಶುಕ್ರವಾರ ಮಗುವನ್ನು ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು. 

ಮದರ್ ಹುಡ್ ಆಸ್ಪತ್ರೆಯ  ವಕ್ತಾರರು, ಮಗು 33 ವಾರಗಳಲ್ಲಿ ಅಕಾಲಿಕವಾಗಿ ಜನಿಸಿದೆ. , ತೀವ್ರ ನಿಗಾ ಅಗತ್ಯವಿರುವ ಅನೇಕ ತೊಂದರೆಗಳಿತ್ತು. ನಮ್ಮ ತಂಡವು ಮಗುವಿಗೆ ನಿರಂತರ ಆರೈಕೆಯನ್ನು ಒದಗಿಸಿದೆ ಮತ್ತು ಚಿಕಿತ್ಸೆಯ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಪೋಷಕರ ಒಪ್ಪಿಗೆಯೊಂದಿಗೆ ಮುಂದುವರಿಸಲಾಗಿದೆ. . ತಂದೆಯ ಕೋರಿಕೆಯ ಮೇರೆಗೆ, ನಾವು ಹಣಕಾಸಿನ ನೆರವನ್ನೂ ವಿಸ್ತರಿಸಿದ್ದೇವೆ ಮತ್ತು ಚಿಕಿತ್ಸೆಯ ವೆಚ್ಚವನ್ನು ಭರಿಸಲು ಪೋಷಕರು ಕ್ರೌಡ್‌ಫಂಡಿಂಗ್ ಪಡೆಯಲು ಸಹಾಯ ಮಾಡಿದ್ದೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!