3ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತ 164ನೇ ಸ್ಥಾನಕ್ಕೆ- ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್‌ ಸ್ವಾಮಿ

ಹೊಸದಿಲ್ಲಿ ಜು.12: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭಾರತ ಬೆಳೆಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಹಿಂದೆ ಬಿದ್ದಿದೆ ಎಂದು ಹೇಳುವ ಚಿತ್ರವೊಂದನ್ನು ತಮ್ಮ ಟ್ವೀಟ್ ಖಾತೆಯಲ್ಲಿ  ಹಂಚಿಕೊಂಡಿರುವ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದಿರುವ, ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್‌ ಅವರು ಮತ್ತೊಮ್ಮೆ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ವಿಶ್ವದ 193 ದೇಶಗಳಲ್ಲಿ ಭಾರತವು ಈಗ 164 ನೇ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. 2011 ರಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದ್ದ (ದೇಶವು) 2021 ರಲ್ಲಿ 164ನೇ ಸ್ಥಾನಕ್ಕೆ ತಲುಪಿದೆ” ಎಂಬ ಮಾಹಿತಿಯನ್ನು ನೀಡುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಈ ಟ್ವೀಟ್ ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿ, ಪಿಪಿಪಿ ವಿಷಯದಲ್ಲಿ ಭಾರತದ ಆರ್ಥಿಕತೆಯು ಇನ್ನೂ 3 ನೇ ಅತಿದೊಡ್ಡ ಸ್ಥಾನದಲ್ಲಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, “GDP ಯ PPP ಮೌಲ್ಯಮಾಪನದಲ್ಲಿ 3ನೇ ಅತಿ ದೊಡ್ಡದು. ಆದರೆ ತಲಾ ಆದಾಯದಲ್ಲಿ 164ನೇ ಸ್ಥಾನದಲ್ಲಿದೆ. ಕುತರ್ಕ ಮಾಡುವ ಮೊದಲು ಪರಿಕಲ್ಪನೆಗಳನ್ನು ತಿಳಿದುಕೊಳ್ಳಿ.” ಎಂದು ತಿರುಗೇಟು ನೀಡಿದ್ದಾರೆ.

ಈ ಪ್ರತಿಪಾದನೆಯನ್ನು ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಮೇಲಿನ ತಪ್ಪು ಮಾಹಿತಿಯನ್ನು ಸತ್ಯಶೋಧನೆ ಮಾಡುವ PIB ಪರಿಶೀಲನೆಯು ನಿರಾಕರಿಸಿದ್ದು, ʼಇದು ನಕಲಿಯಾಗಿದೆ. ಪಿಪಿಪಿ ವಿಷಯದಲ್ಲಿ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಿದೆʼ ಎಂದು ಹೇಳಿದೆ. 

4 thoughts on “3ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತ 164ನೇ ಸ್ಥಾನಕ್ಕೆ- ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್‌ ಸ್ವಾಮಿ

  1. ಇವರ ಮಾತು ಕೇಳಿ ಶ್ರೀಲಂಕಾ ದಿವಾಳಿಯಾಯಿತು.

    ದಡ್ಡ ಶಿಖಾಮಣಿ.. ಪರೋಕ್ಷವಾಗಿ ಒಂದು ರಾಜಕೀಯ ಕುಟುಂಬದ ಕಲ್ಯಾಣಕ್ಕೆ ಕೆಲಸ ಮಾಡುತ್ತಿರುವ ಧುರೀಣ..

    ರಾಮ ಜನ್ಮ ಭೂಮಿ ವಿವಾದ ಬಗೆಹರಿಸಲು ಎಲ್ಲರೂ ಆಸಕ್ತರಿದ್ದ ಸಮಯದಲ್ಲಿ, ತಡ ಮಾಡುವ ಉದ್ದೇಶದಿಂದ ನ್ಯಾಯಾಲಯದ ಮೊರೆ ಹೋಗಿದ್ದರು..

  2. He is a proper hindu and Rss supporter.. He is wrong about this Ppp but for God sake don’t call him a supporter of one family.. You idiot.. Everyone who criticizes bjp government will not become congress supporters you dumb fellow.. Don’t forget who is behind Gandhi family in national herald scam.. You bhakts are more dangerous than talibanis.. I am a supporter of modi but not a bhakt like you…i support modi in many issues and also criticize him for his bad moves and mistakes… You andh bhakt.. Grow up man..

Leave a Reply

Your email address will not be published. Required fields are marked *

error: Content is protected !!