ಉಡುಪಿ: ರೆಡ್ ಬಸ್ ಆನ್‌ಲೈನ್ ಬುಕ್ಕಿಂಗ್ ಎಂಬ ಮಹಾ ಮೋಸ
ಉಡುಪಿ: ರೆಡ್ ಬಸ್‌ನಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ ನೀವೇನಾದರೂ ಪ್ರಯಾಣಿಸಬೇಕೆಂದು ಬಯಸಿದ್ದರೆ ಎಚ್ಚರ ಪ್ರಯಾಣಿಕರೇ ಎಚ್ಚರ…
ಮಂಗಳವಾರ ಉಡುಪಿಯಿಂದ ಬೆಂಗಳೂರಿಗೆ ಹೋಗಲು ಪ್ರಯಾಣಿಕರೋರ್ವರು ರೆಡ್ ಬಸ್‌ನಲ್ಲಿ ರಾತ್ರಿ 10.30 ಕ್ಕೆಂದು ಟಿಕೆಟ್ ಬುಕ್ ಮಾಡಿದ್ದರು. ಬುಕ್ ಮಾಡಿದ್ದ ಪ್ರಯಾಣಿಕರಿಗೆ ಮಂಗಳವಾರ ರಾತ್ರಿ 7 ಗಂಟೆಗೆ ಫೋನ್ ಬಂದಿದ್ದು ರಾತ್ರಿ 8.45 ಮಹಾದೇವಿ ಮೋಟರ್‍ಸ್ ಬಸ್ ಉಡುಪಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಬರುವುದೆಂದು.
ಅದರಂತೆ ಅವರು ನಿಲ್ದಾಣಕ್ಕೆ ಬಂದಿದ್ದರು. ಆದರೆ ಅಲ್ಲಿ 9 ಗಂಟೆಯಾದರೂ ಬಸ್ ಬಂದಿರಲಿಲ್ಲ ನಂತರ ಆನಂದ್ ಬಸ್ ಬಂದಿದ್ದು ರೆಡ್ ಬಸ್ ನಲ್ಲಿ 5 ಪ್ರಯಾಣಿಕರು ಬುಕ್ ಮಾಡಿದವರು ಅದರಲ್ಲಿ ಹತ್ತಿಸಲಾಯಿತು. ಆಗ ಪ್ರಯಾಣಿಕರಿಗೆ ಹಾಗೂ ಬಸ್ ಸಿಬ್ಬಂದಿಗಳ ನಡುವೆ ವಾಗ್ವಾದ ಉಂಟಾಯಿತು.
ತಕ್ಷಣ ಮಾಹಿತಿ ತಿಳಿದ ನಗರ ಠಾಣೆ ಪೊಲೀಸರು ಸ್ಥಳಗಾಮಿಸಿ ಪ್ರಯಾಣಿಕರನ್ನು ಇಳಿಸಿ ದುರ್ಗಾಂಬಾ ಬಸ್‌ನಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಬಸ್ ಇನ್ನೇನೂ ಉಡುಪಿ ಬಿಟ್ಟದಷ್ಟೆ ಕಿನ್ನಿಮೂಲ್ಕಿ ದಾಟುತ್ತಿದಂತೆ ಅದರಲ್ಲಿದ್ದ ಈ ೫ ಪ್ರಯಾಣಿಕರನ್ನು ಇಬ್ಬರು ಮಹಿಳೆಯರ ಸಹಿತ ಬಸ್ಸಿನಿಂದ ಇಳಿಸಲಾಯಿತೆಂದು ತಿಳಿದು ಬಂದಿದೆ.
ನಂತರ ಪ್ರಯಾಣಿಕರು ಈ ರೆಡ್ ಬಸ್‌ನಲ್ಲಿ ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿ ಮೋಸ ಹೋಗಿದ್ದಾಗಿ ಅರಿತು ಮತ್ತೆ ಬಸ್ ನಿಲ್ದಾಣಕ್ಕೆ ಬಂದು ಮತ್ತೆ ಬೇರೊಂದು ಬಸ್ ನಲ್ಲಿ ಟಿಕೆಟ್ ಮಾಡಿ ಬೆಂಗಳೂರಿಗೆ ಪ್ರಯಾಣ ಮಾಡಿದರೆಂದು ಮಾಹಿತಿ ಬಂದಿದೆ.
ತಾವು ಮೋಸ ಹೋಗಿದ್ದು ಇತರರಿಗೂ ಈ ರೀತಿ ಮೋಸ ಆಗಬಾರದೆಂದು ಪ್ರಯಾಣಿಕರು ರೆಡ್ ಬಸ್ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಆಪ್ ಮೇಲೆ ದೂರು ನೀಡಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.