ಉಡುಪಿ ಶ್ರೀಕೃಷ್ಣ ಮಠ: ಯೋಗ ಶಿಬಿರ 30 ಸಾವಿರ ಮಂದಿ ಭಾಗಿ ನಿರೀಕ್ಷೆ

ಉಡುಪಿ: ಶ್ರೀಕೃಷ್ಣ ಮಠ ಪಾರ್ಕಿಂಗ್ ಏರಿಯಾದಲ್ಲಿ ಪ್ರಸಿದ್ಧ ಯೋಗ ಗುರು ಬಾಬಾ ರಾಮ್‌ದೇವ್ ಅವರ ನೇತೃತ್ವದಲ್ಲಿ ನ. 16ರಿಂದ 20 ವರೆಗೆ ನಡೆಯಲಿರುವ ಬೃಹತ್ ಚಿತ ಯೋಗ ಶಿಬಿರದಲ್ಲಿ ಎಲ್ಲರಿಗೂ ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು, 30 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರ್‌ಲಾಲ್ ಆರ್ಯ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಮಠ ಪಾರ್ಕಿಂಗ್ ಬಳಿ ಬೆಳಗ್ಗೆ 5 ರಿಂದ ಬೆಳಗ್ಗೆ 7:30ವರೆಗೆ ಶಿಬಿರ ನಡೆಯಲಿದೆ. ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಅವರ ಆಹ್ವಾನದಿಂದ ಸಂತೋಷಗೊಂಡು ಯೋಗಗುರು ರಾಮ್‌ದೇವ್ ಬಾಬಾ ಅವರು ಇದೇ ಮೊದಲ ಬಾರಿಗೆ 5 ದಿನಗಳ ಯೋಗ ಶಿಬಿರವನ್ನು ಒಂದೇ ಕಡೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ.  ಹರಿದ್ವಾರದದಿಂದ 200ಕ್ಕೂ ಅಧಿಕ ಯೋಗ ಶಿಕ್ಷಕರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಕನ್ನಡದಲ್ಲಿ ಯೋಗದ ಭಂಗಿಗಳ ಮಾರ್ಗದರ್ಶನ ನೀಡಲಾಗುತ್ತದೆ. 5 ದಿನಗಳ ಯೋಗ ಶಿಬಿರದಲ್ಲಿ ಭಾಗವಹಿಸುವುದರಿಂದ ಶಿಬಿರಾರ್ಥಿಗಳ 1ರಿಂದ 5 ಕೆ.ಜಿ. ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು. ರೋಗಿಗಳ ರೋಗದ ಅನುಗುಣವಾಗಿ ಸೂಕ್ತ ಯೋಗಾಸನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

101 ಕಡೆಗಳಲ್ಲಿ ಯೋಗ ಶಿಬಿರ
ಪೂರ್ವಭಾವಿಯಾಗಿ ಜಿಲ್ಲೆಯ 101 ಕಡೆಗಳಲ್ಲಿ 5 ದಿನಗಳ ಉಚಿತ ಯೋಗ ಶಿಬಿರವನ್ನು ನಡೆಸಲಾಗುತ್ತಿದೆ ಎಂದು  ಭವರ್‌ಲಾಲ್ ಆರ್ಯ ತಿಳಿಸಿದರು. ಉಡುಪಿ ಪರಿಸರದಲ್ಲಿ, ಶಿರ್ವ, ಪರ್ಕಳ, ಕಾರ್ಕಳ, ಮಲ್ಪೆ, ಮಣಿಪಾಲ ಸೇರಿದಂತೆ ಒಟ್ಟು 75 ಶಿಬಿರಗಳನ್ನು  ಈಗಾಗಲೆ ಯಶಸ್ವಿಯಾಗಿ ಪೂರೈಸಲಾಗಿದೆ. 50 ಮಂದಿ ಪತಂಜಲಿ ಯೋಗ ಪೀಠ ಶಿಕ್ಷಕರಿಂದ ಕಾರ್ಕಳ, ಉಡುಪಿ, ಬೈಂದೂರಿನಲ್ಲಿ ಶಿಬಿರ ನಡೆಸಲಾಗುತ್ತಿದೆ. ಯೋಗಮಯ ಉಡುಪಿ ಅಭಿಯಾನದ ಅಂಗವಾಗಿ ಯೋಗ ರಥಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.  ಯೋಗ ರಥ ಜಿಲ್ಲೆಯ ಎಲ್ಲಾ ತಾಲೂಕು, ನಗರ ವಾರ್ಡ್‌ಗಳಿಗೆ ಸಂಚರಿಸಿ ಯೋಗ ಶಿಬಿರದ ಮಾಹಿತಿ ನೀಡಲಿದೆ. ಕರ್ನಾಟಕದ ಎಲ್ಲಾ  ಜಿಲ್ಲೆಗಳಿಂದ 300 ಯೋಗ ಶಿಕ್ಷಕರು ನಗರಕ್ಕೆ ಆಗಮಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!