ರೀಚಾರ್ಜ್‌ಗೆ ಬಂದು ನಾಟ್‌ರೀಚಬಲ್ ಆದಳು ! ವಿವಾಹಿತನ ಜೊತೆ ಪರಾರಿ

ಕಾರ್ಕಳ: ಕಾಲೇಜ್‌ಗೆ ಹೋಗಿ ಪರೀಕ್ಷಾ ಹಾಲ್ಟ್ ಟಿಕೆಟ್ ತರಲು ಹೋದ ವಿದ್ಯಾರ್ಥಿನಿ ವಿವಾಹಿತನೊಂದಿಗೆ ಪರಾರಿ. ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿ ಸುಧಾ ವಿ. ಭಟ್ (18) ಕಾರ್ಕಳ ಪೇಟೆಯ ಬಸ್ ನಿಲ್ದಾಣದಲ್ಲಿ ಮೊಬೈಲ್ ಅಂಗಡಿಯ ರೋಷನ್ ಪೂಜಾರಿ ಎಂಬಾತನೊಂದಿಗೆ ಪರಾರಿಯಾಗಿದ್ದಾಳೆ.
ಸುಧಾ ಕಾಲೇಜ್‌ಗೆ ಹೋಗುವಾಗ ರೋಷನ್ ಮೊಬೈಲ್ ಅಂಗಡಿಯಲ್ಲಿ ರಿಚಾರ್ಜ್ ಮಾಡಲು ಹೋಗಿ ಪರಿಚಯವಾಗಿ ನಂತರ ಅವರಿಬ್ಬರ ನಡುವೆ ಗಾಢ ಪ್ರೇಮಾಂಕುರವಾಗಿ ಕಳೆದ 7 ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರೆಂದು ತಿಳಿದು ಬಂದಿದೆ.


ಆದರೆ ಇವರ ಪ್ರೇಮಕ್ಕೆ ಸುಧಾಳ ವಯಸ್ಸು ಅಡ್ಡಿಯಾಗಿತ್ತು. ಕಾರಣ ಯುವತಿಗೆ ಅಪ್ರಾಪ್ತೆಯಾಗಿದ್ದಳು. ಅದಕ್ಕಾಗಿ ಯುವತಿಗೆ 18 ವರ್ಷ ತುಂಬುತ್ತಿದ್ದಂತೆ ಅ.21 ರಂದು ಈಗಾಗಲೇ ಯುವತಿಯೊರ್ವಳನನ್ನು ಪ್ರೀತಿಸಿ ಮದುವೆಯಾಗಿದ್ದ ರೋಷನ್ ಜೊತೆ ಪರಾರಿಯಾಗಿದ್ದಾಳೆ.
ರೋಷನ್ ಯುವತಿಯನ್ನು ಮಣಿಪಾಲದಿಂದ ಝೂಮ್ ಕಾರು ಪಡೆದು ಗೋವಾಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಝೂಮ್ ಕಾರು ಬಿಟ್ಟು ನಂತರ ಮುಂಬಾಯಿ ಕಡೆ ಪರಾರಿಯಾಗಿರುವ ಸಾಧ್ಯತೆ ಇದೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೊಬೈಲ್ ರೀಚಾಜ್‌ಗೆಂದು ರೋಶನ್ ಪೂಜಾರಿ ಅಂಗಡಿ ಬರುತ್ತಿದ್ದ ಸುಧಾಳನ್ನು ಪ್ರೀತಿಸುವ ನೆಪದಲ್ಲಿ ಪುಸಲಾಯಿಸಿ ವಿವಾಹದ ನಾಟಕವಾಡಿ ಆಕೆಯೊಂದಿಗೆ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಸುಧಾ ಭಟ್ ಮರಳಿ ಬರಬಹುದೆನ್ನುವ ನಿರೀಕ್ಷೆಯಲ್ಲಿ ಆಕೆ ನಾಪತ್ತೆಯಾದ 15 ದಿನಗಳ ಬಳಿಕ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಕಲಿಯುವ ವಯಸ್ಸಿನಲ್ಲಿ ಜೀವನ ರೂಪಿಸಿಕೊಳ್ಳುವ ಬದಲು ವಿವಾಹಿತನ ಬಣ್ಣದ ಮಾತುಗಳಿಗೆ ಮರುಳಾಗಿ ನಾಪತ್ತೆಯಾದ ಸುಧಾ ಭಟ್ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

2 thoughts on “ರೀಚಾರ್ಜ್‌ಗೆ ಬಂದು ನಾಟ್‌ರೀಚಬಲ್ ಆದಳು ! ವಿವಾಹಿತನ ಜೊತೆ ಪರಾರಿ

  1. ವಿದ್ಯಾರ್ಥಿಗಳಿಗೆ ಮೊಬೈಲ್ ಕೊಟ್ಟದ್ದು ಮೊದಲನೇ ತಪ್ಪು. ಓದುವ ವಿದ್ಯಾರ್ಥಿಗಳಿಗೆ ಮೊಬೈಲ್ ನ ಅಗತ್ಯವಿಲ್ಲ. ಮೊಬೈಲ್ ನಿಂದ ಒಳ್ಳೆಯದಾಗುವುದಕ್ಕಿಂತ ಹಾಳಾಗುವುದೇ ಹೆಚ್ಚು ಎಂದು ನನ್ನ ಅಭಿಪ್ರಾಯ.

  2. ವಿವಾಹಿತ ನಾಗಿದ್ದೂ ಇಂತಹ ಮೂರ್ಖತನದ ಕೆಲಸ ಮಾಡಿದ ಪಾ ಪಿ ಗೆ ತಕ್ಕ ಶಿಕ್ಷೆ ಯಾಗಬೇಕು ,

Leave a Reply

Your email address will not be published. Required fields are marked *

error: Content is protected !!